ಇದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಪವಾರ್, ಪೊಲೀಸರನ್ನು ಅನೇಕ ಬಾರಿ ಸಂಪರ್ಕಿಸಿದರೂ ನನ್ನ ದೂರನ್ನು ದಾಖಲಿಸಲಾಗುತ್ತಿಲ್ಲ. ವಿಮಾನ ಕಂಪನಿ ಮತ್ತು ನಿಯಂತ್ರಕ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸುವ ಅವಶ್ಯಕತೆಯಿದೆ ಇದೆ ಎಂದು ಹೇಳಿದರು. ಇಂತಹ ಗಂಭೀರ ವಿಷಯದಲ್ಲಿ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದಾಗ, ಪ್ರಭಾವಿ ವ್ಯಕ್ತಿಗಳು ತೆರೆಮರೆಯಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನ ಹುಟ್ಟುತ್ತದೆ. ಒಟ್ಟಾರೆಯಾಗಿ ಸಂಪೂರ್ಣ ತನಿಖೆ ನಡೆದು ಸತ್ಯ ಹೊರಬರಬೇಕು ಎಂದು ರೋಹಿತ್ ಹೇಳಿದರು.