ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಕಚ್ಚಾ ತೈಲದ ಬೆಲೆ ಏರಿಕೆ ಕಾಣುತ್ತಿದೆ. ಈ ಹೆಚ್ಚಳವು ಹಣದುಬ್ಬರವನ್ನು ಕ್ರಮೇಣವಾಗಿ ಹೆಚ್ಚಿಸುತ್ತದೆ. ಇದನ್ನು ನಿಯಂತ್ರಿಸಲು ಬ್ಯಾಂಕುಗಳು ಬಡ್ಡಿ ದರಗಳನ್ನು ಕಡಿತಗೊಳಿಸದೆ, ದರ ಹೆಚ್ಚಳದ ಮುನ್ಸೂಚನೆ ನೀಡುತ್ತಿವೆ. ಬಡ್ಡಿ ದರಗಳು ಹೆಚ್ಚಾಗುವ ನಿರೀಕ್ಷೆಯಿದ್ದಾಗ, ಹೂಡಿಕೆದಾರರು ತಕ್ಷಣಕ್ಕೆ ಚಿನ್ನಕ್ಕಿಂತ ನಗದು ಹಣ ಅಥವಾ ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಹೀಗಾಗಿ ಚಿನ್ನದ ಬೆಲೆ ಪ್ರಸ್ತುತ 4,000 ಡಾಲರ್ ಮಟ್ಟದ ಆಸುಪಾಸಿನಲ್ಲೇ ವಹಿವಾಟು ನಡೆಸುತ್ತಿದೆ.