ರಿಷಭ್ ಅಗರ್ವಾಲ್ ಅವರು ಏಪ್ರಿಲ್ 2025 ರಲ್ಲಿ ಮೆಟಾ ಸೂಪರ್‌ಇಂಟೆಲಿಜೆನ್ಸ್ ಲ್ಯಾಬ್ಸ್‌ನ 'ರೀನ್‌ಫೋರ್ಸ್‌ಮೆಂಟ್ ಲರ್ನಿಂಗ್ ಅಂಡ್ ರೀಸನಿಂಗ್' ವಿಭಾಗಕ್ಕೆ ಸೇರಿದ್ದರು. ಆದರೆ, ಅದ್ಭುತ ಪ್ರತಿಭೆಗಳು ಮತ್ತು ಅತ್ಯಾಧುನಿಕ ಕಂಪ್ಯೂಟಿಂಗ್ ಸೌಲಭ್ಯಗಳಿದ್ದ ಆ ಸಂಸ್ಥೆಯನ್ನು ಕೇವಲ ಐದೇ ತಿಂಗಳಲ್ಲಿ ತೊರೆಯುವ ಕಠಿಣ ನಿರ್ಧಾರ ಕೈಗೊಂಡರು. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದ ಅವರು, "ಗೂಗಲ್ ಬ್ರೈನ್, ಡೀಪ್‌ಮೈಂಡ್ ಮತ್ತು ಮೆಟಾದಲ್ಲಿ ಸುಮಾರು 7.5 ವರ್ಷಗಳ ಸುದೀರ್ಘ ಪ್ರಯಾಣದ ನಂತರ, ನನ್ನ ಜೀವನದಲ್ಲಿ ವಿಭಿನ್ನವಾದ ರಿಸ್ಕ್ ತೆಗೆದುಕೊಳ್ಳಬೇಕೆಂಬ ಬಲವಾದ ಹಂಬಲ ಮೂಡಿದೆ ಎಂದು ತಿಳಿಸಿದ್ದರು. ಅಲ್ಲದೆ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರದ್ದೇ ಆದ ವೇಗವಾಗಿ ಬದಲಾಗುತ್ತಿರುವ ಈ ಜಗತ್ತಿನಲ್ಲಿ, ನೀವು ತೆಗೆದುಕೊಳ್ಳಬಹುದಾದ ಅತ್ಯಂತ ದೊಡ್ಡ ರಿಸ್ಕ್ ಎಂದರೆ ಯಾವುದೇ ರಿಸ್ಕ್ ತೆಗೆದುಕೊಳ್ಳದಿರುವುದು ಎಂಬ ಪ್ರಸಿದ್ಧ ಹೇಳಿಕೆಯನ್ನು ಉಲ್ಲೇಖಿಸಿ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದರು.