ಸಫಾರಿ ಜೀಪ್‌ ಮೇಲೆ ಘೇಂಡಾಮೃಗ ದಾಳಿ; ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರು!..ASSAM

Rhino attack Assam
Rhino attack Assam
Published on

ಪ್ರಮುಖ ಮುಖ್ಯಾಂಶಗಳು

  • ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ಜೀಪ್‌ ಮೇಲೆ ಘೇಂಡಾಮೃಗ ದಾಳಿ
  • ನಿಂತಿದ್ದ ಜೀಪ್‌ ಅನ್ನು ತನ್ನ ಕೊಂಬಿನಿಂದ ಮೇಲಕ್ಕೆತ್ತಿ ಉರುಳಿಸಲು ಯತ್ನ
  • ಜೀಪ್​ನಲ್ಲಿದ್ದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರು, ಯಾವುದೇ ಗಾಯಗಳಾಗಿಲ್ಲ
ಗುವಾಹಟಿ: ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನದ ಬನ್ಸ್ಬಾರಿ ವಲಯದಲ್ಲಿ ಸಫಾರಿ ವೇಳೆ ಪ್ರವಾಸಿಗರಿದ್ದ ಕಾರಿನ ಮೇಲೆ ಘೇಂಡಾಮೃಗ ದಾಳಿ (Rhino attack Assam)ಮಾಡಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಂದಿನಂತೆ ಪ್ರವಾಸಿಗರನ್ನು ಸಫಾರಿಗೆ ಜೀಪ್​ನಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಪ್ರಾಣಿಗಳನ್ನು ವೀಕ್ಷಿಸಲೆಂದು ಕೆಲ ಕಾಲ ನಿಲ್ಲಿಸಿದಾಗ, ಜೀಪ್​​ನತ್ತ ಧಾವಿಸಿ ಬಂದಿದೆ. ಕೆಲವೇ ನಿಮಿಷದಲ್ಲಿ ತನ್ನ ಕೊಂಬಿನಿಂದ ಪ್ರವಾಸಿಗರಿದ್ದ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಜೀಪ್‌ನಲ್ಲಿದ್ದ ಪ್ರವಾಸಿಗರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಘೇಂಡಾಮೃಗವು ಸಫಾರಿ ವಾಹನವನ್ನು ತಳ್ಳುತ್ತಾ, ಅದನ್ನು ಮೇಲೆತ್ತಲು ಮತ್ತು ಉರುಳಿಸಲು ಪದೇ ಪದೇ ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ. ಇದರಿಂದ ಜೀಪ್​​ ಅಲ್ಲಾಡಿರುವ ಕಾರಣ ಎಲ್ಲಿ ಕಾಡು ಪ್ರಾಣಿಯ ತುಳಿತಕ್ಕೊಳಗಾಗುತ್ತೀವೋ ಎಂದು ಪ್ರವಾಸಿಗರು ಹೆದರಿದ್ದಾರೆ. ಈ ವೇಳೆ ಜೀಪ್​ ಚಾಲಕ ತಮ್ಮ ಸಮಯಪ್ರಜ್ಞೆಯನ್ನು ಪ್ರದರ್ಶಿಸಿದ್ದಾರೆ. ಅತ್ಯಂತ ಜಾಗರೂಕತೆಯಿಂದ ಜೀಪ್​ ದೂರ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಾಲಕನ ಈ ಚಾಕಚಕ್ಯತೆಯಿಂದಾಗಿ ಯಾವುದೇ ಪ್ರವಾಸಿಗರಿಗೆ ಗಾಯಗಳಾಗಿಲ್ಲ ಮತ್ತು ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ.

ಅರಣ್ಯ ಅಧಿಕಾರಿಗಳ ಸಲಹೆ ಇದು

ಪ್ರಾಣಿಗಳು ತಮಗೆ ಸಮಸ್ಯೆ ಎದುರಾಗುತ್ತಿದೆ. ನಮಗೆ ಯಾರೋ ಏನನ್ನೋ ಮಾಡುತ್ತಿದ್ದಾರೆ ಎನಿಸಿದಾಗ ಹೀಗೆ ಇಂತಹ ದಾಳಿಗಳನ್ನು ನಡೆಸುತ್ತವೆ. ಇಂತಹ ಸಂದರ್ಭಗಳಲ್ಲಿ ಪ್ರವಾಸಿಗರು ಶಾಂತರಾಗಿರಬೇಕು ಹಠಾತ್ ಚಲನವಲನಗಳನ್ನು ಮಾಡಬಾರದು ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.

ಮಾನಸ್ ಉದ್ಯಾನದ ಬಗ್ಗೆ

ಮಾನಸ್ ರಾಷ್ಟ್ರೀಯ ಉದ್ಯಾನವನ ಯುನೆಸ್ಕೋ ವಿಶ್ವ ಪರಂಪರೆಯ ತಾಣ. ಘೇಂಡಾಮೃಗ ಆನೆಗಳು, ಹುಲಿಗಳು ಮತ್ತು ಕಾಡುಕೋಣಗಳು ಸೇರಿದಂತೆ ಹಲವು ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ನೆಲೆಯಾಗಿದೆ. ಅಸ್ಸಾಂನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು, ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳಿಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net