ಜನವರಿ 7 ರಂದು ಅಫ್ತಾಬ್ ಬಿಹಾರದಿಂದ ಚೆನ್ನೈಗೆ ಕೆಲಸಕ್ಕೆ ಹೋಗಲು ಹೊರಟಿದ್ದರು. ಇದನ್ನೇ ಸಂಚಿಗೆ ಬಳಸಿಕೊಂಡ ವೀರೇಂದ್ರ, ಅಫ್ತಾಬ್‌ನನ್ನು ವಾರಣಾಸಿಗೆ ಬರುವಂತೆ ಒತ್ತಾಯಿಸಿದನು. ವಾರಣಾಸಿ ರೈಲ್ವೆ ನಿಲ್ದಾಣಕ್ಕೆ ಬಂದ ಅಫ್ತಾಬ್‌ನನ್ನು ಮನೆಗೆ ಕರೆದೊಯ್ಯುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಮತ್ತೊಬ್ಬ ಸಹಚರನ ಸಹಾಯದೊಂದಿಗೆ ಹಗ್ಗದಿಂದ ಕುತ್ತಿಗೆ ಬಿಗಿದು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ನಂತರ ಶವವನ್ನು ಮಹಗಾಂವ್ ಮಡೈ ಗ್ರಾಮದ ಕೆರೆಯ ಬಳಿಯ ಹೊಲದಲ್ಲಿ ಎಸೆದು ಪರಾರಿಯಾಗಿದ್ದರು.