ಪರ್ಷಿಯನ್ ಭಾಷೆಯಲ್ಲಿ 'ಕೊಹಿನೂರ್' ಎಂದರೆ "ಬೆಳಕಿನ ಪರ್ವತ" ಎಂದಾಗಿದ್ದು, 1739ರಲ್ಲಿ ಪರ್ಷಿಯನ್ ದೊರೆ ನಾದಿರ್ ಶಾ ಭಾರತದ ಮೇಲೆ ದಾಳಿ ಮಾಡಿದಾಗ, ಮೊಘಲರ ಬಳಿಯಿದ್ದ ಈ ವಜ್ರದ ಪ್ರಖರತೆಯನ್ನು ನೋಡಿ ಆಶ್ಚರ್ಯಚಕಿತನಾಗಿ ಕೊಹ್-ಇ-ನೂರ್! ಎಂದು ಉದ್ಗರಿಸಿದನು. ಅಂದಿನಿಂದ ಇದಕ್ಕೆ ಈ ಹೆಸರು ಬಂದಿತು ಎಂದು ನಂಬಲಾಗಿದೆ. ನಂತರ 1813 ರಲ್ಲಿ ಅಪ್ಘಾನ್ರಿಂದ ಪಂಜಾಬ್ನ ಸಿಖ್ ದೊರೆ ರಂಜಿತ್ ಸಿಂಗ್ ಈ ವಜ್ರವನ್ನು ಪಡೆದುಕೊಂಡನು. 1849 ರಲ್ಲಿ ಬ್ರಿಟಿಷರು ಪಂಜಾಬ್ನ್ನು ವಶ ಪಡಿಸಿಕೊಂಡಾಗ ಈ ಕೊಹಿನೂರ್ನ್ನು ಜಪ್ತಿ ಮಾಡಿಕೊಂಡರು.