ಚೆನ್ನೈ: ತಮಿಳುನಾಡಿನ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಟಿವಿಕೆಗೆ ಭರ್ಜರಿ ಜಯ ಸಿಕ್ಕಿದೆಯಾದರೂ, ಸರ್ಕಾರ ರಚನೆ ಮಾಡುವಷ್ಟು ಸ್ಥಾನಗಳನ್ನು ಗೆದ್ದುಕೊಂಡಿಲ್ಲ. ಹೀಗಾಗಿ, ವಿಜಯ್ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಎಐಎಡಿಎಂಕೆಯ ಶಾಸಕರು ಮುಗಿಬಿದ್ದಿದ್ದರು. ಆ ಬೆನ್ನಲ್ಲೇ, ತನ್ನ ಇಪ್ಪತ್ತೆಂಟು ಶಾಸಕರನ್ನು ಉಳಿಸಿಕೊಳ್ಳುವ ಸಲುವಾಗಿ ಪುದುಚೇರಿಯ ರೆಸಾರ್ಟ್ವೊಂದಕ್ಕೆ ಸ್ಥಳಾಂತರಿದ್ದಾರೆ ಎನ್ನಲಾಗಿದೆ.