ಇರಾನ್ನ ಸಚಿವ ಅಬ್ಬಾಸ್ ಅರಗ್ಚಿ ಅವರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಜೈಶಂಕರ್, ಇರಾನ್ ಬಂಧಿಸಿರುವ ಹಾರ್ಮುಜ್ ಜಲಸಂಧಿಯಿಂದ ಭಾರತಕ್ಕೆ ತೈಲದ ಬಿಸಿ ತಟ್ಟಲಾರಂಭಿಸಿದೆ. ಈ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳುವುದು ಕಷ್ಟವಾಗಿದೆ. ದಯವಿಟ್ಟು, ಜಲಸಂಧಿಯಲ್ಲಿ ನಿಂತಿರುವ ನಮ್ಮ ತೈಲ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಕೋರಿದರು. ಭಾರತದ ಮನವಿಗೆ ಅಸ್ತು ಎಂದ ಇರಾನ್, ಸದ್ಯ ಎರಡು ಹಡುಗುಗಳನ್ನು ಮಾತ್ರ ಬಿಟ್ಟು ಕಳುಹಿಸಿದೆ ಎಂದು ಕೆಲವು ವರದಿಗಳು ತಿಳಿಸಿದವು. ಆದರೆ, 'ಎನ್ಡಿಟಿವಿ' ವರದಿಯಲ್ಲಿ ಇರಾನ್ ನಾವು ಅನುಮತಿ ನೀಡಿಲ್ಲ. ಇದು ಸುಳ್ಳು ಎಂದು ಹೇಳಿದ್ದಾಗಿ ಉಲ್ಲೇಖಿಸಲಾಗಿದೆ.