ಪ್ರಸ್ತುತ ಪಶ್ಚಿಮ ಬಂಗಾಳ ಸೇರಿದಂತೆ ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳ ಪೈಕಿ ಮರು ಮತದಾನಕ್ಕೆ ಆದೇಶಿಸಿರುವುದು ಇದೇ ಮೊದಲ ಬಾರಿಯಾಗಿದೆ. ಮಗ್ರಹತ್ ಪಶ್ಚಿಮ ವಿಧಾನಸಭಾ ಕ್ಷೇತ್ರದ ಯಾರ್ಪುರ್ ಎಫ್ಪಿ ಶಾಲೆ, ನಜ್ರಾ ಎಫ್ಪಿ ಶಾಲೆ, ಡ್ಯೂಲಾ ಎಫ್ಪಿ ಶಾಲೆ, ಘೋಲಾ ನಯಾಪರ ಗರ್ಲ್ಸ್ ಹೈ ಮದರಸಾ ಹಾಗೂ ಏಕ್ತಾರ ಮಲಯ ಮತ್ತು ಬಹಿರ್ಪುರ್ ಕುರ್ಕುರಿಯಾದ ವಿವಿಧ ಕೊಠಡಿಗಳು ಸೇರಿದಂತೆ ಒಟ್ಟು 11 ಮತಗಟ್ಟೆಗಳಲ್ಲಿ ಮರು ಮತದಾನ ನಡೆಯುತ್ತಿದೆ. ಅದೇ ರೀತಿ ಡೈಮಂಡ್ ಹಾರ್ಬರ್ ಕ್ಷೇತ್ರದ ಬಾಗ್ಡಾ ಜೂನಿಯರ್ ಹೈಸ್ಕೂಲ್, ಚಂದಾ ಎಫ್ಪಿ ಶಾಲೆ, ಹಂಡೇಪುರ್ ಮತ್ತು ರಾಯನಗರ ಎಫ್ಪಿ ಶಾಲೆಗಳ ನಾಲ್ಕು ಕೇಂದ್ರಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.