P Chidambaram | MGNREGA ಮರುನಾಮಕರಣ ಮಾಡುವುದು ಗಾಂಧಿಯವರ ಎರಡನೇ ಹತ್ಯೆ ಸಮ: ಪಿ ಚಿದಂಬರಂ ಆರೋಪ

P Chidambaram | ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ
P Chidambaram | ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ
Published on
ನವದೆಹಲಿ: ಎಂಎನ್‌ಆರ್‌ಇಜಿಎ ಮರುನಾಮಕರಣವು ರಾಷ್ಟ್ರಪಿತನ ಎರಡನೇ ಹತ್ಯೆಯಂತೆ ಎಂದು ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ(P Chidambaram) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಖಾಸಗಿ ಸಂಸ್ಥೆವೊಂದರ ಸಂದರ್ಶನ ಮಾತನಾಡಿದ ಚಿದಂಬರಂ, ಕೇಂದ್ರವು ಹಲವಾರು ವರ್ಷಗಳಿಂದ ಜವಾಹರಲಾಲ್ ನೆಹರೂರನ್ನು ನಿಂದಿಸುತ್ತಿದೆ. ಅಲ್ಲದೆ, ಈಗ ಮಹಾತ್ಮ ಗಾಂಧಿಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ. 
ಮಹಾತ್ಮ ಗಾಂಧಿ ಭಾರತೀಯ ಜನರ ನೆನಪಿನಿಂದ ಮರೆಯಾಗಬೇಕು. ಅಲ್ಲದೆ, ಮಕ್ಕಳಿಗೆ ಮಹಾತ್ಮ ಗಾಂಧಿಯವರ ಬಗ್ಗೆ ತಿಳಿಯಬಾರದು. ಜನರ ತುಟಿಗಳಲ್ಲಿ ಮಹಾತ್ಮ ಗಾಂಧಿಯವರ ಹೆಸರು ಇರಬಾರದು. ಕೇಂದ್ರವು ರಾಷ್ಟ್ರದ ನೆನಪಿನಿಂದ ಮಹಾತ್ಮ ಗಾಂಧಿಯವರನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ. 
ಸರ್ಕಾರ ಮಸೂದೆಗೆ ಹೊಸ ಹೆಸರನ್ನು ಘೋಷಿಸಿದಾಗಿನಿಂದ ಕಾಂಗ್ರೆಸ್ ಗದ್ದಲ ಎಬ್ಬಿಸಿದೆ. ಅಲ್ಲದೆ, ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಕೂಡ ಮರುನಾಮಕರಣದ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಂಡಿವೆ. 
ಹೆಸರು ಬದಲಾವಣೆಯ ಬಗ್ಗೆ ಮಾತನಾಡಿರುವ ಚಿದಂಬರಂ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ, ಜಿ ರಾಮ್ ಜಿ ಹಿಂದಿ ಹೆಸರನ್ನು ಹೊಂದಿರುವ ಹಲವು ಮಸೂದೆಗಳಲ್ಲಿ ಒಂದಾಗಿದೆ. ಇದು ಪ್ರತಿ ಮಸೂದೆಗೆ ಹಿಂದಿ ಮತ್ತು ಇಂಗ್ಲಿಷ್ ಹೆಸರನ್ನು ಹೊಂದುವ ಸಂಪ್ರದಾಯವನ್ನು ರದ್ದುಗೊಳಿಸುತ್ತದೆ ಎಂದು ತಿಳಿಸಿದ್ದಾರೆ.  
ವಸಾಹತುಶಾಹಿ ಕಾಲದ ಸಂಕಷ್ಟವನ್ನು ಹೋಗಲಾಡಿಸಲು ಹಿಂದಿ ಭಾಷೆಯನ್ನು ಬಳಸಬೇಕೆಂಬ ಸರ್ಕಾರದ ವಾದವನ್ನು ಎತ್ತಿ ಹಿಡಿದ ಚಿದಂಬರಂ, ಭಾರತದ ಸಂವಿಧಾನವು ಇಂಗ್ಲಿಷ್‌ನಲ್ಲಿದೆ ಮತ್ತು ಭಾರತದ ಸಂವಿಧಾನವು ಹಿಂದಿ ಮತ್ತು ಇಂಗ್ಲಿಷ್ ಭಾರತದ ಅಧಿಕೃತ ಭಾಷೆಗಳಾಗಿರುತ್ತವೆ ಎಂದು ಭರವಸೆ ನೀಡುತ್ತದೆ ಎಂದು ಹೇಳಿದ್ದಾರೆ.
ಯುಪಿಎ ಸರ್ಕಾರ ಪರಿಚಯಿಸಿದ ಪ್ರಮುಖ ಕಾರ್ಯಕ್ರಮದ ಮರುನಾಮಕರಣಕ್ಕಾಗಿ ಉದ್ದೇಶಿಸಲಾದ ಉದ್ಯೋಗ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆಯನ್ನು ಇಂದು ಸಂಜೆ ಲೋಕಸಭೆಯಲ್ಲಿ ಮಂಡಿಸಲಾಯಿತು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net