ದೇವಸ್ಥಾನದ ಬಳಿ ಇರುವ ಪೆರಿಯಾರ್ ಪ್ರತಿಮೆ ತೆರವುಗೊಳಿಸಿ: ಮದ್ರಾಸ್ ಹೈಕೋರ್ಟ್ | Madras High Court

ತಂಜಾವೂರು ಜಿಲ್ಲೆಯ ಕಂಡಿಯೂರಿನ ಅರುಲ್ಮಿಗು ಬ್ರಹ್ಮಶಿರಕಂಡೀಶ್ವರರ್ ದೇವಸ್ಥಾನದ ಬಳಿಯಿರುವ 'ಪೆರಿಯಾರ್' ಇ.ವಿ. ರಾಮಸಾಮಿ ಅವರ ಪ್ರತಿಮೆಯನ್ನು ನಾಲ್ಕು ವಾರಗಳ ಒಳಗೆ ತೆಗೆದುಹಾಕುವಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಶುಕ್ರವಾರ(ಅ. 30) ತಂಜಾವೂರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.
ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್
Published on: 

ಮಧುರೈ: ತಂಜಾವೂರು ಜಿಲ್ಲೆಯ ಕಂಡಿಯೂರಿನ ಅರುಲ್ಮಿಗು ಬ್ರಹ್ಮಶಿರಕಂಡೀಶ್ವರರ್ ದೇವಸ್ಥಾನದ ಬಳಿಯಿರುವ 'ಪೆರಿಯಾರ್' ಇ.ವಿ. ರಾಮಸಾಮಿ ಅವರ ಪ್ರತಿಮೆಯನ್ನು ನಾಲ್ಕು ವಾರಗಳ ಒಳಗೆ ತೆಗೆದುಹಾಕುವಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಶುಕ್ರವಾರ(ಅ. 30) ತಂಜಾವೂರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.

ದೇವಾಲಯದ ಬಳಿಯ ಪೆರಿಯಾರ್ ಪ್ರತಿಮೆ ತೆಗೆಯುವಂತೆ ರಾಮ ರವಿಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಪಿ ವೇಲ್ಮುರುಗನ್ ಮತ್ತು ಕೆ ಕೆ ರಾಮಕೃಷ್ಣನ್ ಅವರ ವಿಭಾಗೀಯ ಪೀಠವು, ಈ ಆದೇಶ ನೀಡಿದೆ.

ರಾಮ ರವಿಕುಮಾರ್ ಸಲ್ಲಿಸಿದ್ದ ಅರ್ಜಿಯಲ್ಲಿ, ದೇವಾಲಯದ ಮುಂದೆ 'ಪೆರಿಯಾರ್' ಇ.ವಿ. ರಾಮಸಾಮಿ ಅವರ ಪ್ರತಿಮೆಯನ್ನು ದ್ರಾವಿಡರ್ ಕಳಗಂ (ಡಿಕೆ) ಸ್ಥಾಪಿಸಿದೆ. ಮತ್ತು ಪ್ರತಿಮೆ ಸುತ್ತಮುತ್ತ ರಾಜಕೀಯ ಪಕ್ಷದ ಧ್ವಜಗಳಿದ್ದು, ಪ್ರತಿಮೆ ಕೆಳಗೆ ದೇವರಿಲ್ಲ ಎಂದು ಘೋಷಿಸುವ ಬರಹಗಳಿವೆ. ದೇವಾಲಯದ ಆಸ್ತಿಯೊಳಗೆ ಮತ್ತು ನೇರವಾಗಿ ಹಿಂದೂ ಪೂಜಾ ಸ್ಥಳದ ಮುಂದೆ ಅಂತಹ ಬರಹಗಳನ್ನು ಪ್ರದರ್ಶಿಸುವುದು ಸೂಕ್ತವಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

Also Read
ವಿಮಲ್ ಇಲೈಚಿ ಜಾಹೀರಾತು: ತುಕರಾಂ ಮುಂಡೆ ನೋಟಿಸ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಅಜಯ್ ದೇವಗನ್ | Ajay Devgn
ಮದ್ರಾಸ್ ಹೈಕೋರ್ಟ್

ಹಿಂದಿನ ವಿಚಾರಣೆಯಲ್ಲಿ ಪ್ರತಿಮೆಯನ್ನು ಪರಿಶೀಲಿಸಿ ಅದರ ಮೂಲ, ಸ್ಥಳ ಮತ್ತು ಇತರ ವಿವರಗಳ ಬಗ್ಗೆ ವರದಿ ಸಲ್ಲಿಸುವಂತೆ ತಿರುವೈಯಾರು ತಹಶೀಲ್ದಾರ್ ಅವರಿಗೆ ನ್ಯಾಯಾಲಯ ಸೂಚಿಸಿತ್ತು. ನಿನ್ನೆ ನಡೆದ ವಿಚಾರಣೆ ವೇಳೆ ತಹಶೀಲ್ದಾರ್ ಅವರು ಪ್ರತಿಮೆಯು ಪೊರಂಬೋಕ್ ಭೂಮಿಯಲ್ಲಿದ್ದು, ರಸ್ತೆ ವಿಸ್ತರಣೆಯ ಸಮಯದಲ್ಲಿ ಅದನ್ನು ಈಗಿರುವ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ತಿಳಿಸಿದ್ದರು.

ಬಳಿಕ ದೇವಾಲಯದ ಆಡಳಿತ ಮಂಡಳಿಯೂ ಪ್ರತಿಮೆಯು ತಮ್ಮ ಆಸ್ತಿಯಲ್ಲಿದ್ದು, ಆ ಸಮಯದಲ್ಲಿ ಅದರ ಸ್ಥಾಪನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು, ಪ್ರತಿಮೆಯನ್ನು ಸುರಕ್ಷಿತವಾಗಿ ಬೇರೆ ಸ್ಥಳಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದ್ದಾರೆ (ಏಜೆನ್ಸೀಸ್).