ಮುಂದುವರೆದು ಮಾತನಾಡಿದ ಮಮತಾ ಬ್ಯಾನರ್ಜಿ, ಎಸ್‌ಐಆರ್ ವಿಚಾರಣೆಯ ಸಮಯದಲ್ಲಿ ಜಿಲ್ಲಾಧಿಕಾರಿಗಳ ಕೆಲಸವನ್ನು ಮೇಲ್ವಿಚಾರಣೆ ಮಾಡಲು ಚುನಾವಣಾ ಆಯೋಗವು ದೆಹಲಿಯಿಂದ ಬಿಜೆಪಿಗೆ ಒಲವಿರುವ ಅಧಿಕಾರಿಗಳನ್ನು ಕಳುಹಿಸುತ್ತಿದೆ. ಅಲ್ಲದೆ, ಕೇಂದ್ರ ಗೃಹ ಸಚಿವರು ಎಲ್ಲಾ ಬಂಗಾಳಿಗಳನ್ನು ಬಾಂಗ್ಲಾದೇಶೀಯರು ಎಂದು ಹಣೆಪಟ್ಟಿ ಕಟ್ಟಿ ಬಂಧನ ಶಿಬಿರಗಳಿಗೆ ಕಳುಹಿಸಲು ಏನು ಬೇಕಾದರೂ ಮಾಡಬಹುದು ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.