ಸಿಕ್ಕಿಂ ರಾಜ್ಯವನ್ನು ಪೂರ್ವದ ಸ್ವರ್ಗ ಮತ್ತು ಆರ್ಕಿಡ್ಗಳ ಉದ್ಯಾನ ಎಂದು ವರ್ಣಿಸಿದ ಪ್ರಧಾನಿ, ಪ್ರಕೃತಿ ಪ್ರೇಮಿಗಳು ಇಲ್ಲಿನ ಸೌಂದರ್ಯ ಮತ್ತು ಆಧ್ಯಾತ್ಮಿಕ ಆನಂದವನ್ನು ಅನುಭವಿಸಲು ಭೇಟಿ ನೀಡಬೇಕೆಂದು ಮನವಿ ಮಾಡಿದರು. ಪ್ರಧಾನಿಯವರು ಅನಾವರಣಗೊಳಿಸಿದ 4,000 ಕೋಟಿ ರೂಪಾಯಿಗಳ ಯೋಜನೆಗಳು ಮೂಲಸೌಕರ್ಯ, ಸಂಪರ್ಕ, ಆರೋಗ್ಯ, ಶಿಕ್ಷಣ, ವಿದ್ಯುತ್, ನಗರಾಭಿವೃದ್ಧಿ, ಪ್ರವಾಸೋದ್ಯಮ ಮತ್ತು ಕೃಷಿಯಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದ್ದು, ಇವು ರಾಜ್ಯದ ಸಮಗ್ರ ಪ್ರಗತಿಗೆ ಹೊಸ ವೇಗ ನೀಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು(ಏಜೆನ್ಸೀಸ್).