

ಪ್ರಮುಖ ಮುಖ್ಯಾಂಶಗಳು
ನವದೆಹಲಿ: ನೀವು ಇಂಟರ್ನೆಟ್ ಬ್ರೌಸಿಂಗ್ ಮಾಡಲು ಗೂಗಲ್ಕ್ರೋಮ್ (Google Chrome) ಬಳಸುತ್ತಿದ್ದೀರಾ? ಹಾಗಿದ್ದರೆ ಈ ಕೂಡಲೇ ಎಚ್ಚೆತ್ತುಕೊಳ್ಳಿ. ಭಾರತ ಸರ್ಕಾರದಸೈಬರ್ ಭದ್ರತಾ ಸಂಸ್ಥೆಯಾದ CERT-In (ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್)ಕ್ರೋಮ್ ಬಳಕೆದಾರರಿಗೆ 'ಹೈ ರಿಸ್ಕ್' (High Risk) ಎಚ್ಚರಿಕೆಯನ್ನು ನೀಡಿದೆ. ಬ್ರೌಸರ್‌ನಲ್ಲಿರುವಗಂಭೀರ ತಾಂತ್ರಿಕ ದೋಷಗಳನ್ನು ಬಳಸಿಕೊಂಡು ಹ್ಯಾಕರ್ ಬಿಗಿ ಭದ್ರತೆಯನ್ನು ಬೇಧಿಸುವ ಸಾಧ್ಯತೆ ಇದೆಎಂದು ಎಚ್ಚರಿಸಲಾಗಿದೆ.
ಏನಿದು ಅಪಾಯ?
CERT-In ವರದಿಯಪ್ರಕಾರ, ಗೂಗಲ್ ಕ್ರೋಮ್‌ನ ಹಳೆಯ ಆವೃತ್ತಿಗಳಲ್ಲಿ ಕೆಲವು ಭದ್ರತಾ ದೋಷಗಳು (Vulnerabilities)ಪತ್ತೆಯಾಗಿವೆ. ವಿಶೇಷವಾಗಿ ಕ್ರೋಮ್‌ನ CSS ರೆಂಡರಿಂಗ್ ಘಟಕದಲ್ಲಿ ಈ ನ್ಯೂನತೆ ಕಂಡುಬಂದಿದೆ.ಇದನ್ನು ಬಳಸಿಕೊಳ್ಳುವ ಸೈಬರ್ ದಾಳಿಕೋರರು ನಿಮ್ಮ ಸಿಸ್ಟಮ್‌ಗೆ 'ರಿಮೋಟ್' ಮೂಲಕ ಪ್ರವೇಶ ಪಡೆಯಬಹುದು.ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿ ಕಳ್ಳತನವಾಗುವುದು ಮಾತ್ರವಲ್ಲದೆ, ಇಡೀ ಸಿಸ್ಟಮ್ ಹ್ಯಾಕರ್ ಕೈವಶವಾಗುವಅಪಾಯವಿದೆ.
ಯಾವ ಆವೃತ್ತಿಗಳುಅಪಾಯದಲ್ಲಿವೆ?
ನೀವು ಈ ಕೆಳಗಿನಆವೃತ್ತಿಗಳಿಗಿಂತ ಹಳೆಯ ಬ್ರೌಸರ್ ಬಳಸುತ್ತಿದ್ದರೆ ತಕ್ಷಣ ಅಪ್‌ಡೇಟ್ ಮಾಡಿ:
Windowsಮತ್ತು Mac:145.0.7632.75/76 ಗಿಂತ ಹಳೆಯ ಆವೃತ್ತಿ.
Linux: 144.0.7559.75 ಗಿಂತ ಹಳೆಯ ಆವೃತ್ತಿ.
ಬಳಕೆದಾರರುಏನು ಮಾಡಬೇಕು?
ಸರ್ಕಾರವು ಈಬೆದರಿಕೆಯನ್ನು ಅತ್ಯಂತ ಗಂಭೀರ ಎಂದು ವರ್ಗೀಕರಿಸಿದೆ. ನಿಮ್ಮ ಡಿಜಿಟಲ್ ಸುರಕ್ಷತೆಗಾಗಿ ಈ ಕೂಡಲೇಈ ಕ್ರಮಗಳನ್ನು ಅನುಸರಿಸಿ.
ಬ್ರೌಸರ್ಅಪ್‌ಡೇಟ್ ಮಾಡಿ: ನಿಮ್ಮಗೂಗಲ್ ಕ್ರೋಮ್ ಬ್ರೌಸರ್ ತೆರೆದು, ಮೇಲ್ಭಾಗದ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. Settings> About Chrome ಗೆ ಹೋಗಿ. ಅಲ್ಲಿ ಲಭ್ಯವಿರುವ ಹೊಸ ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡಿ.
ಆಟೋ-ಅಪ್‌ಡೇಟ್ಆನ್ ಮಾಡಿ: ಸಾಫ್ಟ್‌ವೇರ್ಅಪ್‌ಡೇಟ್‌ಗಳನ್ನು ಸ್ವಯಂಚಾಲಿತವಾಗಿ ಆಗುವಂತೆ ಸೆಟ್ಟಿಂಗ್ಸ್ ಬದಲಾಯಿಸಿಕೊಳ್ಳಿ.
ಅಪರಿಚಿತಲಿಂಕ್‌ಗಳಿಂದ ದೂರವಿರಿ:ಸೈಬರ್ ದಾಳಿಕೋರರು ಇಂತಹ ದೋಷಗಳನ್ನು ಬಳಸಿಕೊಳ್ಳಲು ಹೆಚ್ಚಾಗಿ ಮಾಲ್‌ವೇರ್ ಲಿಂಕ್‌ಗಳನ್ನು ಕಳುಹಿಸುತ್ತಾರೆ.ಸಂಶಯಾಸ್ಪದ ಇಮೇಲ್ ಅಥವಾ ಮೆಸೇಜ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.