ದಾಖಲೆಗಳ ಧೂಳಿಪಟ: 200 ಮಿಲಿಯನ್ ಮೈಲಿಗಲ್ಲು ತಲುಪಿದ ಯಶ್ 'ರಾಯ'ನ ಆರ್ಭಟ | Yash

Yash
Yash
Published on
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾದ ಟೀಸರ್ ಅಕ್ಷರಶಃ ಇಂಟರ್ನೆಟ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಈ ಟೀಸರ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಳೆಯ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಿದೆ.
ಹೌದು, ಕನ್ನಡ ಚಿತ್ರರಂಗದ ಹೆಮ್ಮೆ, ರಾಕಿಂಗ್ ಸ್ಟಾರ್ ಯಶ್ ಅವರ 40ನೇ ಹುಟ್ಟುಹಬ್ಬದ ಅಂಗವಾಗಿ (ಜನವರಿ 8) ಬಿಡುಗಡೆಯಾದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ವಿಶೇಷ ಟೀಸರ್ ಡಿಜಿಟಲ್ ಲೋಕದಲ್ಲಿ ನವ ಇತಿಹಾಸ ಬರೆದಿದೆ.
ಈ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಬರೋಬ್ಬರಿ 220 ಮಿಲಿಯನ್ (22 ಕೋಟಿ) ವೀಕ್ಷಣೆಗಳನ್ನು ಪಡೆಯುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಅತೀ ಹೆಚ್ಚು ವೀಕ್ಷಣೆ ಕಂಡ 'ಫಸ್ಟ್ ಗ್ಲಿಂಪ್ಸ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೆವಿಎನ್ ಪ್ರೊಡಕ್ಷನ್ಸ್ ಅಧಿಕೃತವಾಗಿ ಹಂಚಿಕೊಂಡಿರುವ ಮಾಹಿತಿಯಂತೆ, ಟಾಕ್ಸಿಕ್ ಟೀಸರ್ ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಎಕ್ಸ್ (ಟ್ವಿಟರ್) ಸೇರಿದಂತೆ ಎಲ್ಲಾ ಡಿಜಿಟಲ್ ವೇದಿಕೆಗಳಲ್ಲಿ ಸೇರಿ ಈ ಬೃಹತ್ ಮೊತ್ತದ ವೀಕ್ಷಣೆ ದಾಖಲಿಸಿದೆ.
ಯೂಟ್ಯೂಬ್: ಕೇವಲ 24 ಗಂಟೆಯಲ್ಲಿ 48 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಹಾಗೂ 1.1 ಮಿಲಿಯನ್ ಲೈಕ್ಸ್ ಪಡೆದಿದೆ.
ಇನ್‌ಸ್ಟಾಗ್ರಾಮ್: ವಿವಿಧ ಅಧಿಕೃತ ಖಾತೆಗಳ ಮೂಲಕ 150 ಮಿಲಿಯನ್ ವೀಕ್ಷಣೆ ದಾಖಲಾಗಿದೆ.
ಇತರ ವೇದಿಕೆ: ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಸುಮಾರು 23 ಮಿಲಿಯನ್ ವೀಕ್ಷಣೆ ಕಂಡಿದೆ.
ಹಳೆಯ ದಾಖಲೆಗಳು ಉಡೀಸ್!
ಈ ಹಿಂದೆ 'ಕೆಜಿಎಫ್ 2' (109 ಮಿಲಿಯನ್), 'ಪುಷ್ಪ 2' (107 ಮಿಲಿಯನ್) ಮತ್ತು 'ಅನಿಮಲ್' (71 ಮಿಲಿಯನ್) ಸಿನಿಮಾಗಳು ಸೃಷ್ಟಿಸಿದ್ದ 24 ಗಂಟೆಗಳ ಡಿಜಿಟಲ್ ವೀಕ್ಷಣೆಯ ದಾಖಲೆಗಳನ್ನು ಯಶ್ ಅವರ 'ರಾಯ' ಅವತಾರವು ಪೀಸ್ ಪೀಸ್ ಮಾಡಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಅವರ ಸ್ಟೈಲಿಶ್ ಎಂಟ್ರಿ ಮತ್ತು 'ಡ್ಯಾಡಿ ಈಸ್ ಹೋಮ್' ಎಂಬ ಮಾಸ್ ಡೈಲಾಗ್ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ. ಈ ಚಿತ್ರವು ಮಾರ್ಚ್ 19 ರಂದು ವಿಶ್ವಾದ್ಯಂತ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನೇರವಾಗಿ ಚಿತ್ರೀಕರಣಗೊಂಡು, ಉಳಿದ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಲಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net