88 ಲಕ್ಷ ಕೋಟಿ ರೂ.ಗೇರಲಿದೆ ರಿಯಲ್ ಎಸ್ಟೇಟ್

 ರಿಯಲ್ ಎಸ್ಟೇಟ್
ರಿಯಲ್ ಎಸ್ಟೇಟ್
Published on

ನವದೆಹಲಿ: ದೇಶದ ರಿಯಲ್ ಎಸ್ಟೇಟ್ ಮಾರುಕಟ್ಟೆ 2030ರ ವೇಳೆಗೆ 88 ಲಕ್ಷ ಕೋಟಿ ರೂ.ಗಳ ಬೃಹತ್ ಗಾತ್ರಕ್ಕೆ ಬೆಳೆಯಲಿದ್ದು, ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚು ಜಿಗಿತ ಕಾಣಲಿದೆ ಎಂದು ಕೆಪಿಎಂಜಿ ಮತ್ತು ನರೆಡ್ಕೊ ಸಂಸ್ಥೆಗಳ ಜಂಟಿ ಸಮೀಕ್ಷೆಯ ವರದಿ ತಿಳಿಸಿದೆ.

2025ರಲ್ಲಿ ಅಂದಾಜು 26.4 ಲಕ್ಷ ಕೋಟಿ ರೂ. ಮೌಲ್ಯ ಹೊಂದಿದ್ದ ಈ ವಲಯ, 2047ರ ಹೊತ್ತಿಗೆ ‘ವಿಕಸಿತ ಭಾರತ’ದ ಗುರಿ ತಲುಪಲು ಪ್ರಮುಖ ಕಾರಣವಾಗಲಿದೆ. ನರೆಡ್ಕೊ ಅಧ್ಯಕ್ಷ ಪ್ರವೀಣ್ ಜೈನ್ ಅವರ ಪ್ರಕಾರ, ಈ ವಲಯ ಕೇವಲ ಕಟ್ಟಡಗಳನ್ನಷ್ಟೇ ಅಲ್ಲದೆ ಉತ್ಪಾದಕತೆ ಮತ್ತು ಮೂಲಸೌಕರ್ಯದ ಮೂಲಕ ದೇಶದ ಆರ್ಥಿಕತೆಯನ್ನು ರೂಪಿಸಲಿದೆ. ಅಲ್ಲದೆ, 2030ರ ವೇಳೆಗೆ ಈ ಕ್ಷೇತ್ರದಲ್ಲಿ ಉದ್ಯೋಗಗಳ ಸಂಖ್ಯೆ ಈಗಿರುವ 7 ಕೋಟಿಯಿಂದ 10 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ.

Related Stories

Boiled Sambar
35 ರಲ್ಲಿ 31 ಕೌನ್ಸಿಲರ್‌ಗಳು ಪಕ್ಷೇತರ, ಕೋರ್ಟ್ ಮೊರೆ, ರಾತ್ರಿ 10 ಗಂಟೆಯವರೆಗೂ ಮತದಾನ!...ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದೆ ರಾಜಸ್ಥಾನದ ಚುನಾವಣೆ | Tijara Election
Delhi riots case: Sharjeel Imam granted interim bail to attend a wedding ceremony.
Waris Pathan
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net