ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ತಮ್ಮ ವಿರುದ್ಧದ ಆರೋಪಗಳು ಆಧಾರರಹಿತ ಎಂದರು. ಇದೇ ವೇಳೆ ತಮ್ಮ ಭಾಷಣದಲ್ಲಿ ಡಿಎಂಕೆ ಸರ್ಕಾರದ ದ್ರಾವಿಡ ಆಡಳಿತ ಮಾದರಿಯನ್ನು ಸಮರ್ಥಿಸಿಕೊಂಡ ಅವರು, ಇ.ವಿ. ರಾಮಸಾಮಿ (ಪೆರಿಯಾರ್), ಸಿ.ಎನ್. ಅಣ್ಣಾದೊರೈ ಮತ್ತು ಎಂ. ಕರುಣಾನಿಧಿ ಅವರಂತಹ ನಾಯಕರು ತಮಿಳುನಾಡಿನ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ನೀತಿಗಳಿಗೆ ಅಡಿಪಾಯ ಹಾಕಿದರು ಎಂದು ಹೇಳಿದ್ದಾರೆ.