ಆರ್ಸಿಬಿ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದು, ಇದು ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ದಾಖಲಾದ ಅತ್ಯಧಿಕ ಗರಿಷ್ಠ ಸ್ಕೋರ್ ಎಂಬ ಹೊಸ ಇತಿಹಾಸ ಸೃಷ್ಟಿಸಿದ್ದು, 2023ರ ಐಪಿಎಲ್‌ನ ಕ್ವಾಲಿಫೈಯರ್ 2 ಪಂದ್ಯದಲ್ಲಿ ಅಹಮದಾಬಾದ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡವು ದಾಖಲಿಸಿದ್ದ 233/3 ರನ್‌ಗಳ ಹಿಂದಿನ ಪ್ಲೇಆಫ್ ದಾಖಲೆಯನ್ನು ಆರ್ಸಿಬಿ ಇಂದು ಧೂಳೀಪಟ ಮಾಡಿದೆ. ಈ ಪಂದ್ಯವನ್ನು ಗೆಲ್ಲುವ ತಂಡವು ನೇರವಾಗಿ ಐಪಿಎಲ್ 2026ರ ಫೈನಲ್‌ಗೆ ಪ್ರವೇಶಿಸಲಿದೆ.