ಸತತ ಎರಡನೇ ಬಾರಿ ಫೈನಲ್​ಗೆ ಲಗ್ಗೆಯಿಟ್ಟು ಇತಿಹಾಸ ಸೃಷ್ಟಿಸಿದ ಆರ್​ಸಿಬಿ: ಕಿಂಗ್​ ಕೊಹ್ಲಿ 600 ರನ್​ಗಳ ದಾಖಲೆ | King Kohli

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Published on
ಮುಂಬೈ: ಐಪಿಎಲ್ 2026ರ ಕ್ವಾಲಿಫೈಯರ್- 1ರಲ್ಲಿ ನಿನ್ನೆ(ಮೇ 26) ಧರ್ಮಶಾಲದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಬಾರಿ ಫೈನಲ್​ಗೆ ಲಗ್ಗೆಯಿಟ್ಟು ಇತಿಹಾಸ ಸೃಷ್ಟಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಆರ್​ಸಿಬಿ, ಐಪಿಎಲ್​ ಇತಿಹಾಸದಲ್ಲೇ ಪ್ಪೇ ಆಪ್​ ನಲ್ಲಿ 254ರನ್​ಗಳ ಬೃಹತ್ ಸ್ಕೋರ್​ ಗಳಿಸುವ ಮೂಲಕ ದಾಖಲೆ ಬರೆಯಿತು. ಇದೇ ವೇಳೆ ಸ್ಟಾರ್ ಓಪನರ್ ಆಗಿ ಆಟವಾಡಿದ ಕಿಂಗ್​ ಕೊಹ್ಲಿ 25 ಎಸೆತಗಳಲ್ಲಿ 1 ಸಿಕ್ಸ್​, ನಾಲ್ಕು ಬೌಂಡರಿ ಬಾರಿಸುವ ಮೂಲಕ ಒಟ್ಟು 43 ರನ್ ಗಳಿಸಿದರು. ಮತ್ತು ಈ ಸೀಸನ್​​ನಲ್ಲಿ 600 ರನ್‌ಗಳನ್ನು ಪೂರ್ಣಗೊಳಿಸಿದರು.
ಇದೇ ವೇಳೆ ಸತತ ನಾಲ್ಕು ಸೀಸನ್​ಗಳಲ್ಲಿ (2023-2026) 600 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಲ್ಲಿಯವರೆಗೆ, ಈ ದಾಖಲೆಯನ್ನು ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್(2020, 2021, 2022) ಮತ್ತು ಕ್ರಿಸ್ ಗೇಲ್(2011, 2012, 2013) ಸತತ ಮೂರು ಬಾರಿ ಈ ಸಾಧನೆ ಮಾಡಿದ್ದರು. ವಿರಾಟ್ ಇತ್ತೀಚೆಗೆ ಅವರ ಎಲ್ಲರ ದಾಖಲೆಯನ್ನು ಮುರಿದಿದ್ದಾರೆ.
ಇನ್ನೂ ಈ ಪಂದ್ಯದ ಗೆಲುವಿನೊಂದಿಗೆ ಆರ್‌ಸಿಬಿ ಫೈನ್​ಲ್​ಗೆ ನೇರ ಪ್ರವೇಶ ಪಡೆದಿದ್ದು, ಅಭಿಮಾನಿಗಳಲ್ಲಿ ಈ ಸಲ ಕಪ್ ನಮ್ದೇ ಎಂಬ ಭರವಸೆ ಮತ್ತಷ್ಟು ಗಟ್ಟಿಯಾಗಿದೆ. ಸತತ ಎರಡನೇ ಬಾರಿಗೆ ಫೈನಲ್ ತಲುಪಿರುವ ಬೆಂಗಳೂರು ತಂಡ, ಈ ಬಾರಿಯೂ ಟ್ರೋಫಿ ಮುಡಿಗೇರಿಸಿಕೊಳ್ಳಲು ಸಂಪೂರ್ಣ ಸಜ್ಜಾಗಿದೆ (ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net