ರೆಪೊ ದರ ಕಡಿತಗೊಳಿಸಿದ RBI : ವಸತಿ, ವಾಹನ, ವಾಣಿಜ್ಯ ಸಾಲ ಅಗ್ಗವಾಗುವ ನಿರೀಕ್ಷೆ!

RBI cuts repo rate
RBI cuts repo rate
Published on

ಪ್ರಮುಖ ಮುಖ್ಯಾಂಶಗಳು

  • ವಸತಿ, ವಾಹನ, ವಾಣಿಜ್ಯ ಸಾಲಗಾರರಿಗೆ ಗೂಡ್​ನ್ಯೂಸ್​
  • ರೆಪೊ ದರದಲ್ಲಿ ಶೇ.25 ರಷ್ಟು ಮೂಲಂಶವನ್ನು 5.25% ಕ್ಕೆ ಇಳಿಕೆ
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು(GDP) ಶೇ.8.2ರಷ್ಟು ಬೆಳವಣಿಗೆ ಕಂಡ ಕೆಲ ದಿನಗಳ ಬಳಿಕ ಇದೀಗ ರೆಪೊ ದರ ಕಡಿತ ನಿರ್ಧಾರವನ್ನು ಆರ್​ಬಿಐ ಶುಕ್ರವಾರ ಘೋಷಣೆ ಮಾಡಿದೆ.
ಹೌದು, 2025ರ ಡಿಸೆಂಬರ್ ದ್ವೈಮಾಸಿಕ ಹಣಕಾಸು ನೀತಿಯ ಪ್ರಕಟಿಸಿದ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ , ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ನೀತಿ ಸಮಿತಿ (MPC) ರೆಪೊ ದರದಲ್ಲಿ ಶೇ.25 ರಷ್ಟು ಮೂಲಂಶವನ್ನು 5.25% ಕ್ಕೆ ಇಳಿಸಲು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ವೃದ್ಧಿಸುವ ಹಿನ್ನೆಲೆ ಈ ಕ್ರಮ ಕೈಗೊಂಡಿದೆ. ಅಲ್ಲದೆ ರೂಪಾಯಿ ಕುಸಿತದ ಬಗ್ಗೆ ಕಳವಳಗಳನ್ನು ಈ ನಿರ್ಧಾರ ದೂರ ಮಾಡಿದೆ ಎಂದು ತಜ್ಞರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಣದುಬ್ಬರ ಕಡಿಮೆಯಾಗುತ್ತಿರುವುದರಿಂದ ಜೂನ್‌ನಲ್ಲಿ MPC ಪ್ರಮುಖ ಸಾಲ ದರವನ್ನು ಶೇ.6 ರಿಂದ ಶೇ.5.5ಕ್ಕೆ ಇಳಿಸಿತ್ತು. ಇದೀಗ ಮತ್ತೆ ರೆಪೋ ದರ ಕಡಿತ ಹಿನ್ನೆಲೆ ಚಿಲ್ಲರೆ ಸಾಲಗಾರರಿಗೆ, ವಸತಿ, ವಾಹನ ಮತ್ತು ವಾಣಿಜ್ಯ ಸಾಲಗಳು ಅಗ್ಗವಾಗುವ ನಿರೀಕ್ಷೆಯಿದೆ.

ಏನಿದು ರೆಪೊ ದರ?

ಆರ್‌ಬಿಐನಿಂದ ಬ್ಯಾಂಕ್ ಪಡೆದ ಸಾಲಗಳ ಮೇಲಿನ ಬಡ್ಡಿಯೇ ರೆಪೋ ದರವಾಗಿದೆ.ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿದರೆ, ಬ್ಯಾಂಕಿಗೆ ಸಾಲ ಪಡೆಯುವುದು ಹೆಚ್ಚು ದುಬಾರಿಯಾಗುತ್ತದೆ. ಆರ್‌ಬಿಐ ಅದನ್ನು ಕಡಿಮೆ ಮಾಡಿದರೆ, ಬ್ಯಾಂಕುಗಳು ಅಗ್ಗದ ಸಾಲಗಳನ್ನು ಪಡೆಯುತ್ತವೆ.

ರೆಪೊ ದರವನ್ನು ಏಕೆ ಬದಲಾವಣೆ ಮಾಡಲಾಗುತ್ತದೆ?

ಆರ್‌ಬಿಐ ರೆಪೊ ದರವನ್ನು ಬದಲಾಯಿಸುವ ಮುಖ್ಯ ಉದ್ದೇಶವೆಂದರೆ ದೇಶದ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು. ರೆಪೋ ದರ ಎಂದರೆ ಆರ್‌ಬಿಐಯು ವಾಣಿಜ್ಯ ಬ್ಯಾಂಕುಗಳಿಗೆ ಸಾಲ ನೀಡುವ ದರ. ಇದನ್ನು ಬದಲಾಯಿಸುವುದರಿಂದ ಹಣದ ಪೂರೈಕೆ, ಹಣದುಬ್ಬರ (ಇನ್‌ಫ್ಲೇಷನ್) ಮತ್ತು ಆರ್ಥಿಕ ಬೆಳವಣಿಗೆಯನ್ನು ನಿಯಂತ್ರಿಸಲಾಗುತ್ತದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net