ಎಫ್‌ಡಿಎ ಮಹಾರಾಷ್ಟ್ರದಾದ್ಯಂತ ಆಹಾರ ಸುರಕ್ಷತೆ ತಪಾಸಣೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದು, ಮುಂಬೈ ಮತ್ತು ರಾಜ್ಯದ ಹಲವಾರು ಹೋಟೆಲ್, ರೆಸ್ಟೋರೆಂಟ್‌ಗಳು ಮತ್ತು ಇತರ ಆಹಾರ ಸಂಸ್ಥೆಗಳಲ್ಲಿ ಆಹಾರ ಸುರಕ್ಷತೆಯ ಉಲ್ಲಂಘನೆಗಳು ಕಂಡುಬಂದಿವೆ. ಇತ್ತೀಚಿನ ಒಂದು ಕ್ರಮದಲ್ಲಿ, ಅಧಿಕಾರಿಗಳು 31 ಕಡೆ ದಾಳಿ ನಡೆಸಿದ್ದಾರೆ. ಈ ವೇಳೆ, ಸುಮಾರು 25 ಲಕ್ಷ ರೂ. ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದು, ಐದು ಸಂಸ್ಥೆಗಳ ಪರವಾನಗಿಗಳನ್ನು ರದ್ದು ಮಾಡಿದ್ದಾರೆ,(ಏಜೆನ್ಸೀಸ್).