ಬೈಕ್ ಸ್ಟಾರ್ಟ್ ಆಗದಿದ್ದರಿಂದ ಮೆಕ್ಯಾನಿಕ್ ಬಂದು ಸೈಡ್ ಪ್ಯಾನೆಲ್ ಹಾಗೂ ಇಂಜಿನ್ ಭಾಗವನ್ನು ಬಿಚ್ಚಿ ನೋಡಿದಾಗ ಕಂಡ ದೃಶ್ಯ ಅಚ್ಚರಿ ಮೂಡಿಸಿತ್ತು. ಬೈಕ್ನ ಒಳಗಿದ್ದ ಹಲವು ವೈರ್ಗಳನ್ನು ಇಲಿಗಳು ಕಚ್ಚಿ ಹಾಳು ಮಾಡಿದ್ದವು. ಅಷ್ಟೇ ಅಲ್ಲ, ಬಹಳ ದಿನ ಬೈಕ್ ಒಂದೇ ಕಡೆ ನಿಂತಿದ್ದರಿಂದ ಅದರೊಳಗೆ ಇಲಿ ಮನೆ ಮಾಡಿಕೊಂಡಿತ್ತು. ಇದಕ್ಕಿಂತ ಶಾಕ್ ಕೊಟ್ಟಿದ್ದು, ಆ ಗೂಡಿನಲ್ಲಿ ಇಲಿ ಮರಿಗಳೂ ಪತ್ತೆಯಾಗಿದ್ದು. ಅಂದರೆ ಬೈಕ್ನ್ನು ಮಾಲೀಕರು ಬಳಸದೇ ಇಟ್ಟಿದ್ದರಿಂದ ಬುಲೆಟ್ ಒಳಗೆ ಇಲಿಗಳ ಕುಟುಂಬವೊಂದು ನೆಲೆಸಿತ್ತು.