ಇನ್ನು, ಅಜಯ್ ರೈ ಕೂಡ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ. ತಾವು ಮೀನು ತಿನ್ನುತ್ತಿರುವ ಒಂದೇ ಒಂದು ಸಾಕ್ಷಿ ತೋರಿಸಿದರೂ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಆದರೆ ಕಾರ್ಯಕ್ರಮದ ಜಾಗದಲ್ಲಿ ಮೀನು ತೊಳೆಯುವುದು, ಕತ್ತರಿಸುವುದು, ಅಡುಗೆ ಮಾಡುವ ದೃಶ್ಯಗಳು ಕಂಡುಬಂದಿವೆ. ಈ ವಿಚಾರ ಸ್ಥಳೀಯರಲ್ಲೂ ಅಸಮಾಧಾನ ಮೂಡಿಸಿದ್ದು, ಕೆಲವರು ಪ್ರತಿಭಟನೆ ನಡೆಸಿದ್ದಾರೆ.