ಬಂಧಿತ ಆರೋಪಿಗಳಿಂದ ಇದುವರೆಗೆ ಒಟ್ಟು ₹79.85 ಲಕ್ಷ ನಗದು, 1,121 ಅಮೆರಿಕನ್ ಡಾಲರ್, ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವಿನಾಶ್ ಶುಕ್ಲಾ ಅವರಿಂದ ₹20.39 ಲಕ್ಷ ನಗದು, 1,121 ಅಮೆರಿಕನ್ ಡಾಲರ್, ಎರಡು ಚಿನ್ನದ ಸರ, ಒಂದು ಚಿನ್ನದ ಉಂಗುರ ಹಾಗೂ ಬೆಳ್ಳಿ ಬಣ್ಣದ ಲೋಹದ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.