ಕೃತಿ ಸನೊನ್​ ಕಾಣಿಸಿಕೊಂಡಿದ್ದ ರಕ್ಷಾ ಬಂಧನ ಜಾಹೀರಾತು ವಿವಾದ; ಜನಾಕ್ರೋಶಕ್ಕೆ ಮಣಿದು ಜೀವ ಜುವೆಲ್ಲರಿ ಕ್ಷಮೆಯಾಚನೆ! Giva Jewellery Apology

ಜನಾಕ್ರೋಶದ ಬಳಿಕ ಜಾಹೀರಾತನ್ನು ಹಿಂಪಡೆದ ಜೀವ ಜುವೆಲ್ಲರಿ
ಜನಾಕ್ರೋಶದ ಬಳಿಕ ಜಾಹೀರಾತನ್ನು ಹಿಂಪಡೆದ ಜೀವ ಜುವೆಲ್ಲರಿ
Published on

ಪ್ರಮುಖ ಮುಖ್ಯಾಂಶಗಳು

  • ಕೃತಿ ಸನೋನ್ ರಕ್ಷಾ ಬಂಧನ ಜಾಹೀರಾತು ವಿವಾದ
  • ನಮ್ಮಿಂದ ನೋವಾಗಿದ್ದರೆ ಕ್ಷಮಿಸಿ, ನಮ್ಮ ಉದ್ದೇಶ ಅದಾಗಿರಲಿಲ್ಲ
  • ಜನಾಕ್ರೋಶದ ಬಳಿಕ ಜಾಹೀರಾತನ್ನು ಹಿಂಪಡೆದ ಜೀವ ಜುವೆಲ್ಲರಿ
ನವದೆಹಲಿ: ಕೆಲ ದಿನಗಳಿಂದ ರಕ್ಷಾ ಬಂಧನ ಹಬ್ಬದ ಕುರಿತಂತೆ ಚಿತ್ರಿಕರಿಸಿದ ಜಾಹೀರಾತೊಂದು ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಜಾಹೀರಾತನ್ನು ಜೀವ ಜುವೆಲ್ಲರಿ (Giva Jewellery Apology) ಅವರು ಪ್ರಯೋಜಿಸಿದ್ದು, ರಕ್ಷಾ ಬಂಧನ ಹಬ್ಬದಲ್ಲಿ ಮನೆಯಲ್ಲಿರುವ ಪ್ರಾಣಿಗಳನ್ನು ಒಳಗೊಳ್ಳಿಸಿಕೊಳ್ಳಿ ಎನ್ನುವುದು ಈ ಜಾಹೀರಾತಿನ ಸಂದೇಶವಾಗಿತ್ತು.
ಆದರೆ, ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ನಟಿ ಕೃತಿ ಸನೊನ್​ ಧರಿಸಿದ್ದ ಬಟ್ಟೆ ಸಾಂಪ್ರದಾಯಿಕವಾಗಿಲ್ಲ. ಇದು ಹಿಂದೂಗಳ ಹಬ್ಬಕ್ಕೆ ಮಾಡಿರುವ ಅಪಚಾರ, ಪ್ರತಿ ಬಾರಿ ಹಿಂದೂಗಳ ಹಬ್ಬಗಳ ಬಗ್ಗೆ ಅಪಹಾಸ್ಯ, ಅಸಹ್ಯ ಮಾಡುವುದೇ ಇವರ ಚಾಳಿ ಎಂದು ಜನರು ಈ ಜಾಹೀರಾತಿನ ಬಗ್ಗೆ ಕಿಡಿ ಕಾರುತ್ತಿದ್ದರು. 

ಈದೀಗ, ಜನರ ಆಕ್ರೋಶಕ್ಕೆ ಬೆಚ್ಚಿದ ಜೀವ ಜುವೆಲ್ಲರಿಯವರು, ಈ ಜಾಹೀರಾತನ್ನು ಎಲ್ಲಾ ವೇದಿಕೆಗಳಿಂದ ನಿಷೇಧಿಸಿ ಜನರಲ್ಲಿ ಕ್ಷಮೆಯನ್ನು ಕೇಳಿದ್ದಾರೆ.

ಜನರ ಭಾವನೆಗೆ ಧಕ್ಕೆಯಾಗಿದ್ದರೆ ಕ್ಷಮಿಸಿ!

ಜನರಿಂದ ಈ ಜಾಹೀರಾತಿಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಜೀವ ಜುವೆಲ್ಲರಿ ಅವರು, ನಮಗೆ ನಮ್ಮ ಸಂಪ್ರದಾಯ, ಆಚರಣೆ, ಹಬ್ಬಗಳ ಬಗ್ಗೆ ಹೆಚ್ಚಿನ ಗೌರವವಿದೆ. ಈಗ ವಿವಾದಕ್ಕೆ ಕಾರಣವಾಗಿರುವ ಜಾಹೀರಾತಿನ ಉದ್ದೇಶ, ಮನೆಯಲ್ಲಿ ಆಚರಿಸಲಾಗುವ ಹಬ್ಬಗಳಲ್ಲಿ ಸಾಕು ಪ್ರಾಣಿಗಳನ್ನು ಸೇರಿಸಿಕೊಳ್ಳಿ ಎಂಬ ಸಂದೇಶ ನೀಡುವುದು ನಮ್ಮ ಉದ್ದೇಶವಾಗಿತ್ತು.
ಆದರೆ, ಈ ಜಾಹೀರಾತಿನ ಕೆಲ ಅಂಶಗಳು, ಕೆಲ ಜನರ ಮನಸ್ಸಿಗೆ ನೋವುಂಟು ಮಾಡಿದೆ ಎಂದು ನಮಗೆ ತಿಳಿದಿದೆ. ನಮ್ಮ ಉದ್ದೇಶ ಯಾರಿಗೂ ನೋವುಂಟು ಮಾಡುವುದಲ್ಲಾಗಿತ್ತು. ಆದರೂ ನಮ್ಮ ತಪ್ಪನ್ನು ನಾವು ಒಪ್ಪಿಕೊಂಡು ನಿಮ್ಮಲ್ಲಿ ಕ್ಷಮೆ ಕೇಳುತ್ತಿದ್ದು, ಈ ಜಾಹೀರಾತನ್ನು ಎಲ್ಲಾ ಡಿಜಿಟಲ್​ ವೇದಿಕೆಗಳಿಂದ ತೆಗೆದುಹಾಕುತ್ತಿದ್ದೆವೆಂದು ಸ್ಪಷ್ಟನೆ ನೀಡಿದ್ದಾರೆ. 

ಕೃತಿಗೆ ಕಂಗನಾ ಕ್ಲಾಸ್​!

ಈ ಜಾಹೀರಾತಿಗೆ ಪ್ರತಿಕ್ರಿಯಿಸಿದ್ದ ಬಾಲಿವುಡ್​ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್​, ಈ ಜಾಹೀರಾತನ್ನು ಬೇಕಂತಲೇ ಜನರ ಭಾವನೆಗೆ ಧಕ್ಕೆ ಉಂಟುಮಾಡಲೆಂದೇ ತಯಾರಿಸಿದ್ದಾಗಿ ಆರೋಪಿಸಿದ್ದರು. ಹೆಣ್ಣಿಗೆ ಧರಿಸಲು ಎಷ್ಟೊಂದು ಬಟ್ಟೆ ಪ್ರಕಾರಗಳ ಅವಕಾಶವಿದೆ. ಆದರೆ ಇಲ್ಲಿ ಡೀಪ್​ನೆಕ್​ ಬ್ಲೌಸ್​ ಬಳಕೆ ಅನಗತ್ಯವಾಗಿದ್ದು, ನೀವು ನಿಮ್ಮ ಸಹೋದರಿಗೆ ರಾಖಿ ಕಟ್ಟುವಾಗ ಬಿಕಿನಿ ಧರಿಸುತ್ತೀರಾ? ಎಂದು ಕಟುವಾಗಿ ಪ್ರಶ್ನಿಸಿದ್ದರು.

ಹೆಣ್ಣನ್ನು ಆಕೆಯ ಬಟ್ಟೆಯಿಂದ ಅಳೆಯಬೇಡಿ!

ಈ ಜಾಹೀರಾತಿನ ವಿವಾದ ತೀವ್ರವಾಗುತ್ತಿದ್ದಂತೆ, ಇಲ್ಲಿ ಕಾಣಿಸಿಕೊಂಡಿದ್ದ, ಕೃತಿ ಸನೊನ್​ ಕೂಡ ಮೌನ ಮುರಿದು, ಹೆಣ್ಣನ್ನು ಆಕೆ ಧರಿಸುವ ಬಟ್ಟೆಯಿಂದ ತೂಕಹಾಕಬೇಡಿ. ಹಬ್ಬವನ್ನು ಹಬ್ಬದ ರೀತಿ ನೋಡಿ, ಏಕೆ ಹೆಣ್ಣು ತನಗೆ ಬೇಕಾದ ಬಟ್ಟೆ ಧರಿಸುವ ಸ್ವಾತಂತ್ರ ಹೊಂದಿಲ್ಲವೇ? ಎಂದು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net