ಈ ವೇದಿಕೆಯ ಮೂಲಕ ಸಮಾಜದ ವಿವಿಧ ಕ್ಷೇತ್ರಗಳ ಜನರನ್ನು ಒಂದೇ ಕಡೆ ತರಲು ಪ್ರಯತ್ನಿಸಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳು, ಶಿಕ್ಷಕರು, ನಿವೃತ್ತ ನೌಕರರು, ಯುವಕರು, ವೃತ್ತಿಪರರು ಸೇರಿದಂತೆ ಎಲ್ಲರೂ ತಮ್ಮ ಅನುಭವ ಮತ್ತು ಸಲಹೆಗಳನ್ನು ಹಂಚಿಕೊಳ್ಳಬಹುದು ಎಂದು ಲತಾ ರಜನಿಕಾಂತ್ ತಿಳಿಸಿದ್ದಾರೆ. "ಜನರಿಗೆ ತಮ್ಮದೇ ಆದ ಗುರುತು ಮತ್ತು ಸಮಾಜದಲ್ಲಿ ಭಾಗವಹಿಸುವ ಅವಕಾಶ ಸಿಗಬೇಕು. ಜನರ ನಡುವೆ ಉತ್ತಮ ಸಂಪರ್ಕ ಬೆಳೆಸುವುದು ನಮ್ಮ ಗುರಿ" ಎಂದು ಅವರು ಹೇಳಿದರು.