ಟಿವಿಕೆ ಪಕ್ಷದ ನಾಯಕ ಆಧವ್ ಅರ್ಜುನ ಇತ್ತೀಚೆಗೆ ನನ್ನ ಬಗ್ಗೆ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದ್ದಾರೆ. ಅರ್ಜುನ ಅವರ ಮಾನಹಾನಕಾರಿ ಹೇಳಿಕೆಗಳನ್ನು ಖಂಡಿಸಿದ ತಮಿಳುನಾಡು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ, ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, ಕೇಂದ್ರ ಸಚಿವ ಎಲ್. ಮುರುಗನ್, ರಾಜ್ಯ ಸಚಿವ ರಘುಪತಿ, ತೋಲ್. ತಿರುಮಾವಲವನ್, ಎಸ್‌ಪಿ ವೇಲುಮಣಿ, ನನ್ನ ಸ್ನೇಹಿತ ಅಣ್ಣಾಮಲೈ, ಅರ್ಜುನಮೂರ್ತಿ, ಅನ್ಬುಮಣಿ ರಾಮದಾಸ್, ಜಿಕೆ ವಾಸನ್, ಜಾನ್ ಪಾಂಡಿಯನ್, ಪುಗಝೆಂಡಿ ಮತ್ತು ಇತರ ಅನೇಕ ರಾಜಕೀಯ ನಾಯಕರುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.