ರಾಜಸ್ಥಾನ ರಾಯಲ್ಸ್​​ ಬ್ಯಾಟಿಂಗ್​​ ಅರ್ಭಟ; ಪಂಜಾಬ್​​ ಕಿಂಗ್ಸ್​ಗೆ ಮೊದಲ ಸೋಲು | PBKS vs RR

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
PBKS vs RR: ಐಪಿಎಲ್​​ 2006ರ ಆವೃತ್ತಿಯ ಚಂಡೀಗಢದ ಮುಲ್ಲಾಪುರದ ಯಾದವೇಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಅಧ್ಭುತ ಬ್ಯಾಟಿಂಗ್​ ಮೂಲಕ ರಾಜಸ್ಥಾನ ರಾಯಲ್ಸ್​ 6 ವಿಕೆಟ್​ಗಳಿಂದ ಗೆದ್ದು ಬೀಗಿದ್ದು, ಈ ಆವತ್ತಿಯಲ್ಲಿ ಪಂಜಾಬ್ ಮೊದಲು ಸೋಲು ಕಂಡಿದೆ.
ಪಂಜಾಬ್​ ಕಿಂಗ್ಸ್​ ನೀಡಿದ 222 ರನ್​​ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್​ ತಂಡ, ಇನ್ನೂ 4 ಎಸೆತಗಳಿರುವಂತೆಯೇ ಗೆಲುವು 19.2 ಓವರ್​ಗಳಿಂದ ನಾಲ್ಕು ವಿಕೆಟ್ ನಷ್ಟಕ್ಕೆ 228 ರನ್​ಗಳಿಸಿ ರೋಚಕ ಗೆಲುವನ್ನು ಸಾಧಿಸಿತು. ವೈಭವ್ ಸೂರ್ಯವಂಶಿ (43), ಯಶಸ್ವಿ ಜೈಸ್ವಾಲ್ (51), ಫೆರೇರಾ(ಅಜೇಯ 52) ಹಾಗೂ ಶುಭಂ ದುಬೆ (ಅಜೇಯ 31) ಗಳಿಸಿದರು.

ಫರೇರಾ, ಶುಭಂ ದುಬೆ ಆರ್ಭಟ

ಪಂದ್ಯದಲ್ಲಿ ಫರೇರಾ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಶುಭಂ ದುಬೆ ಪಂಜಾಬ್​ ಬೌಲರ್​ಗಳನ್ನು ಅಕ್ಷರಶಃ ಬೆಂಡೆತ್ತಿದ್ದು, 5ನೇ ವಿಕೆಟ್ ಜೊತೆಯಾಟದಲ್ಲಿ 32 ಎಸೆತಗಳಲ್ಲಿ 77 ರನ್​ಗಳಿಸಿ ಡವನ್ನ ಗೆಲುವಿನ ತಂಡವನ್ನು ಗೆಲುವಿಗೆ ಕಾರಣರಾದರು. ಫೆರೇರಾ 26 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್​ಗಳ ಸಹಿತ ಅಜೇಯ 52 ರನ್​ಗಳಿಸಿದರೆ, ದುಬೆ ಕೇವಲ 12 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ಗಳ 31 ರನ್ ಗಳಿಸಿ ಅಜೇಯರಾದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡ, 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್​ಗಳಿಸಿತ್ತು. ಪ್ರಭ್ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ ಅವರೊಂದಿಗೆ ಅದ್ಭುತವಾಗಿ ಆಟವಾಡಿ 59 ರನ್​ ಗಳಿಸಿದರು. ಕೊನೆ ಓವರ್​ನಲ್ಲಿ ಮಾರ್ಕಸ್ ಸ್ಟೊಯಿನಿಸ್ 24 ರನ್​ಗಳಿಸಿ ಕೇವಲ 22 ಎಸೆತಗಳಲ್ಲಿ 62 ರನ್ ಗಳಿಕೆ ವ್ಯರ್ಥವಾಯಿತು.
ಪಂದ್ಯದ ಮುಖ್ಯಾಂಶಗಳು
ಪಿಬಿಕೆಎಸ್​ ಮೊತ್ತ: 222/4 (20 ಓವರ್)
ಆರ್​ಆರ್​ ಮೊತ್ತ: 228/04 (19.2 ಓವರ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net