ತತ್ಕಾಲ್ ಟಿಕೆಟ್ ಬುಕ್ಕಿಂಗ್ ಗೆ ಒಟಿಪಿ ಕಡ್ಡಾಯಗೊಳಿಸಿದ ರೈಲ್ವೆ ಇಲಾಖೆ Tatkal tickets

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ತತ್ಕಾಲ್ (Tatkal tickets) ಟಿಕೆಟ್ ಬುಕಿಂಗ್ ಸೌಲಭ್ಯದ ದುರುಪಯೋಗವನ್ನು ತಡೆಯಲು ಭಾರತೀಯ ರೈಲ್ವೆ ಸಚಿವಾಲಯವು ಒಂದು ಪ್ರಮುಖ ಹೆಜ್ಜೆಯನ್ನು ಇಟ್ಟಿದ್ದು, ಇದು ಮೀಸಲಾತಿ ಕೌಂಟರ್‌ಗಳಲ್ಲಿ ಬುಕ್ ಮಾಡಲಾದ ಎಲ್ಲಾ ತತ್ಕಾಲ್ ಟಿಕೆಟ್‌ಗಳಿಗೆ ಕಡ್ಡಾಯವಾದ ಒಂದು ಬಾರಿ ಪಾಸ್‌ವರ್ಡ್ (OTP) ಪರಿಶೀಲನೆಯನ್ನು ಪರಿಚಯಿಸುತ್ತಿದೆ. ಈ ನಿಯಮವು ನ್ಯಾಯಯುತ ಪ್ರವೇಶ ಮತ್ತು ಹೆಚ್ಚುವರಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದ್ದು, ಕೆಲವೇ ದಿನಗಳಲ್ಲಿ ದೇಶಾದ್ಯಂತ ಎಲ್ಲಾ ರೈಲುಗಳು ಒಳಗೊಳ್ಳಲಿದೆ.

OTP ಆಧಾರಿತ ಪರಿಶೀಲನೆ

ನವೆಂಬರ್ 17 ರಂದು ರೈಲ್ವೆ ಸಚಿವಾಲಯವು ಒಟಿಪಿ ಆಧಾರಿತ ತತ್ಕಾಲ್ ಟಿಕೆಟ್ ವ್ಯವಸ್ಥೆಯನ್ನು ಪ್ರಾರಂಭಿಸಿತು. ಇದು ಪೈಲಟ್ ಯೋಜನೆಯಾಗಿ ಆಯ್ದ ರೈಲುಗಳಿಂದ ಪ್ರಾರಂಭವಾಯಿತು. ಮೊದ ಮೊದಲಿಗೆ ಕಡಿಮೆ ಸಂಖ್ಯೆಯ ರೈಲುಗಳಿಗೆ ಈ ನಿಯಮವನ್ನು ಅಳವಡಿಸಲಾಯಿತು. ಈ ವ್ಯವಸ್ಥೆಯ ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದ ನಂತರ ಪ್ರಸ್ತುತ, ಈ ವ್ಯವಸ್ಥೆಯನ್ನು 52 ರೈಲುಗಳಿಗೆ ವಿಸ್ತರಿಸಲಾಗಿದೆ.

ರಾಷ್ಟ್ರವ್ಯಾಪಿ ಬಿಡುಗಡೆ ಸನ್ನಿಹಿತವಾಗಿದೆ

ಇತ್ತೀಚಿನ ಅಧಿಕೃತ ಹೇಳಿಕೆಯ ಪ್ರಕಾರ, ಮುಂಬರುವ ದಿನಗಳಲ್ಲಿ ಉಳಿದ ರೈಲುಗಳಿಗೆ ಎಲ್ಲಾ ಮೀಸಲಾತಿ ಕೌಂಟರ್‌ಗಳಲ್ಲಿ OTP ಪರಿಶೀಲನಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಇದು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಪ್ರಯಾಣಿಕರು ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ. ನಂತರ ಆ ಮೊಬೈಲ್ ಸಂಖ್ಯೆಗೆ OTP ಪರಿಶೀಲನೆಯನ್ನು ಕಳುಹಿಸಲಾಗುತ್ತದೆ. ಆ ನಂತರವೇ ಟಿಕೆಟ್​ ಖಾತ್ರಿಯಾಗಿದೆ ಎಂದು ಪ್ರಯಾಣಿಕರು ತಿಳಿಯಬೇಕು.

ಉದ್ದೇಶವೇನು?

ಇದರ ಮುಖ್ಯ ಉದ್ದೇಶ ತತ್ಕಾಲ್ ಬುಕಿಂಗ್ ವ್ಯವಸ್ಥೆಯಲ್ಲಿ ಕೊನೆಯ ಕ್ಷಣದಲ್ಲಾಗುವ ದುರುಪಯೋಗವನ್ನು ತಡೆಯುವುದು ಪ್ರಾಥಮಿಕ ಉದ್ದೇಶವಾಗಿದೆ. ಇದನ್ನು ಹೆಚ್ಚಾಗಿ ಏಜೆಂಟ್‌ಗಳು ಮತ್ತು ಇತರರು ಹೆಚ್ಚಿನ ಬೇಡಿಕೆಯ ಟಿಕೆಟ್‌ಗಳನ್ನು ಪಡೆದುಕೊಳ್ಳಲು ಬಳಸಿಕೊಳ್ಳುತ್ತಾರೆ. OTP ಪರಿಶೀಲನೆಯನ್ನು ಕಡ್ಡಾಯಗೊಳಿಸುವ ಮೂಲಕ, ಈ ವ್ಯವಸ್ಥೆಯು ನಿಜವಾದ ಪ್ರಯಾಣಿಕರಿಗೆ ಆದ್ಯತೆ ನೀಡುತ್ತದೆ. ಹಾಗೂ ಬುಕಿಂಗ್ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಅನುಕೂಲಕರವಾಗಿಸಲು ಸಹಾಯ ಮಾಡುತ್ತದೆ.

ವಿಶಾಲವಾದ ಪ್ರಯಾಣಿಕ ಸ್ನೇಹಿ ಕಾರ್ಯತಂತ್ರದ ಭಾಗ

ಈ ಹೊಸ OTP ಆಧಾರಿತ ಕೌಂಟರ್ ಬುಕಿಂಗ್ ವ್ಯವಸ್ಥೆಯು ರೈಲ್ವೆ ಸಚಿವಾಲಯವು ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ನ್ಯಾಯಸಮ್ಮತತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ವರ್ಷದ ಜುಲೈನಲ್ಲಿ, ಸಚಿವಾಲಯವು ದೇಶಾದ್ಯಂತ ಆನ್‌ಲೈನ್ ತತ್ಕಾಲ್ ಬುಕಿಂಗ್‌ಗಳಿಗೆ ಆಧಾರ್ ಆಧಾರಿತ OTP ಪರಿಶೀಲನೆಯನ್ನು ಕಡ್ಡಾಯಗೊಳಿಸಿತ್ತು. ಹೆಚ್ಚುವರಿಯಾಗಿ, ಅಕ್ಟೋಬರ್ 1 ರಿಂದ, ಬುಕಿಂಗ್ ತೆರೆದ ನಂತರದ ನಿರ್ಣಾಯಕ ಮೊದಲ 15 ನಿಮಿಷಗಳಲ್ಲಿ ಆಧಾರ್-ದೃಢೀಕೃತ ಬಳಕೆದಾರರು ಮಾತ್ರ IRCTC ಪೋರ್ಟಲ್‌ನಲ್ಲಿ ಕಾಯ್ದಿರಿಸಿದ ಸಾಮಾನ್ಯ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ತಿಳಿದುಬಂದಿತ್ತು.

ಅನುಕೂಲತೆ ಮತ್ತು ಪಾರದರ್ಶಕತೆ

ರೈಲ್ವೆ ಟಿಕೆಟ್ ಸೇವೆಗಳಲ್ಲಿ ಭದ್ರತೆ ಕಾಯ್ದುಕೊಳ್ಳಲು, ಪ್ರಯಾಣಿಕರ ಅನುಕೂಲತೆ ಮತ್ತು ಪಾರದರ್ಶಕತೆಯನ್ನು ಸುಧಾರಿಸಲು ಈ ಕ್ರಮಗಳನ್ನು ಕಾಯ್ದುಕೊಳ್ಳುವುದು ಗಮನಾರ್ಹ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಧಾರ್ ಪರಿಶೀಲನೆಯನ್ನು ಮೊಬೈಲ್ ಆಧಾರಿತ OTP ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಮೂಲಕ, ಟಿಕೆಟ್ ಬುಕಿಂಗ್ ಅನ್ನು ಹೆಚ್ಚು ನ್ಯಾಯಯುತವಾಗಿಸುವುದು ಹಾಗೂ ದೀರ್ಘಕಾಲದಿಂದ ಮೋಸದ ಅಭ್ಯಾಸಗಳನ್ನು ತಡೆಗಟ್ಟಲು ಈ ನಿಯಮವು ಸಹಕಾರಿಯಾಗಿದೆ ಎಂದು ತಿಳಿದುಬಂದಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net