ಇಂಡಿಗೋ ವಿಮಾನಯಾನ ಬಿಕ್ಕಟ್ಟು.. ಪ್ರಯಾಣಿಕರ ಸಹಾಯಕ್ಕೆ ಮುಂದಾದ ಭಾರತೀಯ ರೈಲ್ವೆ | Indian Railways

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ವ್ಯಾಪಕ ವಿಮಾನ ರದ್ಧತಿ
  • ಪ್ರಯಾಣಿಕರ ಸಹಾಯಕ್ಕೆ ಧಾವಿಸಿದ ಭಾರತೀಯ ರೈಲ್ವೆ
  • 114 ಹೆಚ್ಚುವರಿ ಟ್ರಿಪ್​ಗಳ ಕೈಗೊಳ್ಳಲಿರುವ 37 ಪ್ರೀಮಿಯಂ ರೈಲ್ವೆಗಳು
Indian Railways : ಕಳೆದ ಕೆಲವು ದಿನಗಳಿಂದ ಇಂಡಿಗೋ(IndiGO) ವಿಮಾನ ಸಂಸ್ಥೆಯ ವ್ಯಾಪಕ ವಿಮಾನ ರದ್ದತಿಯಿಂದಾಗಿ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಪರದಾಡುವಂತಾಗಿದೆ. ಜನರನ್ನು ಅವರ ಸ್ಥಳಗಳಿಗೆ ಸಾಗಿಸುವ ಬೇಡಿಕೆ ಹೆಚ್ಚಾಗಿದ್ದು ಇದನ್ನು ಸರಿಮಾಡಲುಭಾರತೀಯ ರೈಲ್ವೆ(Indian Railways)ಯು ದೇಶಾದ್ಯಂತ 37 ಪ್ರೀಮಿಯಂ ರೈಲುಗಳಲ್ಲಿ 116 ಹೆಚ್ಚುವರಿ ಬೋಗಿಗಳನ್ನು ನಿಯೋಜಿಸಿ,114 ಹೆಚ್ಚುವರಿ ಟ್ರಿಪ್‌ಗಳನ್ನು ನಿರ್ವಹಿಸುವ ಮೂಲಕ ಪ್ರಯಾಣಿಕರನ್ನು ತಮ್ಮ ನಿಗದಿತ ಸ್ಥಳಗಳಿಗೆ ತಲುಪಿಸುವ ಯೋಜನೆಯನ್ನು ಕೈಗೊಡಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ತಮ್ಮ ಸ್ಥಳಗಳಿಗೆ ಮರಳಲಿದ್ದಾರೆ.
ಹೆಚ್ಚಿನ ಬೇಡಿಕೆಯ ಮಾರ್ಗಗಳಲ್ಲಿ ಹೆಚ್ಚುವರಿ ಚೇರ್ ಕಾರ್ ಮತ್ತು ಸ್ಲೀಪರ್ ಕ್ಲಾಸ್ ಕೋಚ್‌ಗಳನ್ನು ನಿಯೋಜಿಸಲಾಗಿದ್ದು, ಉತ್ತರ ರೈಲ್ವೆ ವಲಯದಲ್ಲಿ ಎಂಟು ರೈಲುಗಳನ್ನು ಹೆಚ್ಚಿಸಲಾಗಿದ್ದು, 3ಎಸಿ ಮತ್ತು ಚೇರ್ ಕಾರ್ ಕೋಚ್‌ಗಳನ್ನು ಸೇರಿಸಲಾಗಿದೆ. ಈ ಕ್ರಮದಿಂದಾಗಿ ಹೆಚ್ಚಿನ ಪ್ರಯಾಣಿಕರು ತಾವು ತಲುಪಬೇಕಾದ ಜಾಗವನ್ನು ಸೇರಲಿದ್ದಾರೆ.
ಸಚಿವಾಲಯದ ಪ್ರಕಾರ, ಪಶ್ಚಿಮ ರೈಲ್ವೆ ವಲಯದಲ್ಲಿ 3ಎಸಿ ಮತ್ತು 2ಎಸಿ ಕೋಚ್‌ಗಳನ್ನು ಸೇರಿಸಿದ ನಾಲ್ಕು ರೈಲುಗಳನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಪಶ್ಚಿಮ ಪ್ರದೇಶಗಳಿಂದ ರಾಷ್ಟ್ರ ರಾಜಧಾನಿಗೆ ಆಗಮಿಸಲಿರುವ ಪ್ರಯಾಣಿಕರ ಸಂಚಾರ ಸುಗಮವಾಗಲಿದೆ. ಪೂರ್ವ ಮತ್ತು ಮಧ್ಯ ರೈಲ್ವೆ ವಲಯದಲ್ಲಿ ಡಿ. 6 ರಿಂದ 10 ರ ನಡುವೆ ಐದು ಟ್ರಿಪ್‌ಗಳಲ್ಲಿ ಹೆಚ್ಚುವರಿ 2ಎಸಿ ಕೋಚ್‌ಗಳೊಂದಿಗೆ ರಾಜೇಂದ್ರ ನಗರ ನವದೆಹಲಿ ಎಕ್ಸ್​ಪ್ರೆಸ್​ (12309) ಸೇವೆಯನ್ನು ಬಲಪಡಿಸಲಾಗಿದ್ದು, ಇದು ಬಿಹಾರದಿಂದ ದೆಹಲಿ ಮಾರ್ಗದ ಪ್ರಯಾಣವನ್ನು ಉತ್ತೇಜಿಸಲಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ಕರಾವಳಿ ರೈಲ್ವೆಯು ಭುವನೇಶ್ವರ ನವದೆಹಲಿ ಸೇವೆಗಳಲ್ಲಿ ಐದು ಹೆಚ್ಚುವರಿ ಟ್ರಿಪ್‌ಗಳಲ್ಲಿ 2ಎಸಿ ಕೋಚ್‌ಗಳನ್ನು ಸೇರಿಸುವ ಮೂಲಕ ಒಡಿಶಾ ಮತ್ತು ರಾಜಧಾನಿ ನಡುವಿನ ಸಂಪರ್ಕವನ್ನು ಸುಧಾರಿಸಲಿದೆ ಎಂದು ತಿಳಿಸಿದ್ದಾರೆ. ಪೂರ್ವ ರೈಲ್ವೆ ವಲಯದಲ್ಲಿ ಡಿ.7 ಮತ್ತು 8 ರಂದು ಮೂರು ಪ್ರಮುಖ ರೈಲುಗಳಲ್ಲಿ 6 ಸ್ಲೀಪರ್ ಕ್ಲಾಸ್ ಕೋಚ್‌ಗಳನ್ನು ಸೇರಿಸುವ ಮೂಲಕ ಹೆಚ್ಚುವರಿ ಆರು ಟ್ರಿಪ್​ಗಳನ್ನು ಹೊಡೆಯುವುದರಿಂದ ಪೂರ್ವ ವಲಯದ ಪ್ರಾದೇಶಿಕ ಮತ್ತು ಅಂತರರಾಜ್ಯ ಪ್ರಯಾಣದ ಬೇಡಿಕೆಯನ್ನು ಪೂರೈಸಲಾಗುವುದು ಎಮದಿದ್ದಾರೆ.


ವಿಶೇಷ ರೈಲು ಸೇವೆಗಳು

ಇದರ ಜತೆಗೆ ಭಾರತೀಯ ರೈಲ್ವೆಯು ಪ್ರಯಾಣಿಕರನ್ನು ಮತ್ತಷ್ಟು ಬೆಂಬಲಿಸಲು ನಾಲ್ಕು ವಿಶೇಷ ರೈಲು ಸೇವೆಗಳನ್ನು ಸಹ ನಿರ್ವಹಿಸಲಿದೆ.
ಈಶಾನ್ಯ ವಲಯದಲ್ಲಿ ಡಿ.6 ರಿಂದ 13 ರ ವರೆಗೆ ತಲಾ ಎಂಟು ಟ್ರಿಪ್‌ಗಳಲ್ಲಿ 3AC ಮತ್ತು ಸ್ಲೀಪರ್ ಕೋಚ್‌ಗಳನ್ನು ಹೊಂದಿರುವ ಎರಡು ಪ್ರಮುಖ ರೈಲುಗಳನ್ನು ಹೆಚ್ಚಿಸಿದ್ದು, ಇದರಿಂದ ಈಶಾನ್ಯ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಶ್ಚಿಮ ವಲಯದ ಕಡೆಗೆ ಹೆಚ್ಚಿನ ಬೇಡಿಕೆಯನ್ನು ಪೂರೈಸಲು, ನವದೆಹಲಿ ಮುಂಬೈ ಸೆಂಟ್ರಲ್ ನವದೆಹಲಿ ಮೀಸಲಾದ ಸೂಪರ್‌ಫಾಸ್ಟ್ ವಿಶೇಷ ರೈಲು (04002, 04001) ಡಿ.6 ಮತ್ತು 7 ರಂದು ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.
ಹಜರತ್ ನಿಜಾಮುದ್ದೀನ್ ತಿರುವನಂತಪುರಂ ಸೆಂಟ್ರಲ್ ಮೀಸಲಾದ ಸೂಪರ್‌ಫಾಸ್ಟ್ ವಿಶೇಷ ರೈಲು (04080) ಡಿ.6 ರಂದು ಏಕಮುಖವಾಗಿ ಚಲಿಸಲಿದ್ದು, ದಕ್ಷಿಣ ಭಾರತದ ಪ್ರಯಾಣಿಕರಗೆ ಇದು ಅತ್ಯಂತ ಅನುಕೂಲದಾಯಕವಾಗಲಿದೆ. (ಎಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net