ಮಧ್ಯಮ ಕ್ರಮಾಂಕದಲ್ಲಿ ಧ್ರುವ್ ಜುರೆಲ್ (53 ರನ್, 40 ಎಸೆತ) ಮತ್ತು ರಿಯಾನ್ ಪರಾಗ್ (51 ರನ್, 26 ಎಸೆತ) ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. ರಾಜಸ್ಥಾನ್ ತಂಡವು ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ 220 ರನ್‌ಗಳತ್ತ ಮುನ್ನುಗ್ಗುತ್ತಿತ್ತು. ಆದರೆ, 16ನೇ ಓವರ್‌ನಲ್ಲಿ ಡೆಲ್ಲಿಯ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಒಂದೇ ಓವರ್‌ನಲ್ಲಿ ಬರೊಬ್ಬರಿ 3 ವಿಕೆಟ್ ಕಬಳಿಸಿ ಇಡೀ ಪಂದ್ಯಕ್ಕೆ ಭೀಕರ ಟ್ವಿಸ್ಟ್ ನೀಡಿದರು. ಒಟ್ಟು 4 ವಿಕೆಟ್ (4/40) ಪಡೆದ ಸ್ಟಾರ್ಕ್ ರಾಜಸ್ಥಾನಿಗಳನ್ನು 193 ರನ್‌ಗಳಿಗೆ ಕಟ್ಟಿಹಾಕಿದರು. ಡೆಲ್ಲಿ ಪರ ಯುವ ಬೌಲರ್ ಮಾಧವ್ ತಿವಾರಿ ಕೂಡ 27 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದರು,(ಏಜೆನ್ಸೀಸ್).