ರಾಹುಲ್ ಗಾಂಧಿ ಭಾಷಣಕ್ಕೆ ನಿರಾಕರಣೆ; ಕಾಂಗ್ರೆಸ್ ಸಂಸದರಿಂದ ಗದ್ದಲ; ಅಧಿವೇಶನದಿಂದ 8 ಸಂಸದರು ಅಮಾನತು | MP‘s suspended

ಲೋಕಸಭೆ
ಲೋಕಸಭೆ
Published on
ನವದೆಹಲಿ: ಲೋಕಸಭೆಯಲ್ಲಿ ಮಂಗಳವಾರ(ಫೆ. 03) ಅಶಿಸ್ತು ತೋರಿದ ಆರೋಪದ ಮೇಲೆ ಕಾಂಗ್ರೆಸ್​​ನ ಎಂಟು ಮಂದಿ ಸಂಸದರನ್ನು(MP‘s suspended) ಈ ಅಧಿವೇಶನದ ಅವಧಿ ಮುಗಿಯುವವರೆಗೂ ಲೋಕಸಭೆಯಿಂದ ಅಮಾನತು ಮಾಡಿ ಸ್ಪೀಕರ್ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ.
ಗುರ್ಜೀತ್ ಸಿಂಗ್ ಔಜ್ಲಾ, ಹಿಬಿ ಈಡನ್, ಸಿ ಕಿರಣ್ ಕುಮಾರ್ ರೆಡ್ಡಿ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಮಾಣಿಕ್ಕಂ ಟ್ಯಾಗೋರ್, ಪ್ರಶಾಂತ್ ಪಡೋಲೆ, ಡೀನ್ ಕುರಿಯಾಕೋಸ್ ಹಾಗೂ ಓರ್ವ ಸಿಪಿಐಎಂ ಸಂಸದ ಸ್ ವೆಂಟಕೇಸನ್ ಅಮಾನತುಗೊಂಡ ಸಂಸದರು.
ಇಂದೂ ಕೂಡ ಕಾಂಗ್ರೆಸ್​ ನಾಯಕ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರಾವಣೆ ಅವರ ಅಪ್ರಕಟಿತ ಪುಸ್ತಕದಲ್ಲಿನ ಭಾರತ-ಚೀನಾ ನಡುವಿನ ಯುದ್ದದ ಸಂಬಂಧಿತ ಸಾಲುಗಳನ್ನು ಓದಲು ಪ್ರಯತ್ನಿಸಿದ್ದು, ಅವಕಾಶ ನಿರಾಕರಿಸಲಾಗಿದೆ. ಈ ಹಿನ್ನೆಲೆ ಅವಕಾಶ ನಿರಾಕರಿಸಿದ್ದನ್ನು ವಿರೋಧಿಸಿ ಲೋಕಸಭೆಯಲ್ಲಿ ಕಾಂಗ್ರೆಸ್​ ಸಂಸದರು ಪ್ರತಿಭಟಿಸಿದ್ದರು.ಈ ವೇಳೆ ಸ್ಪೀಕರ್ ಓಂ ಬಿರ್ಲಾ ಅವರತ್ತ ಸಂಸದರು ಪೇಪರ್ ತೂರಿದ್ದರು ಎನ್ನಲಾಗಿದೆ.
ಈ ಹಿನ್ನೆಲೆ ಸಭಾಪತಿಯ ಅಧಿಕಾರವನ್ನು ಕಡೆಗಣಿಸಿ ವರ್ತಿಸಿದ ಆರೋಪದ ಮೇಲೆ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಸಂಸದರನ್ನು ಅಮಾನತುಗೊಳಿಸುವ ನಿರ್ಣಯವನ್ನು ಮಂಡಿಸಿದ್ದರು. ಧ್ವನಿ ಮತದ ಮೂಲಕ ಸದನದಲ್ಲಿ ನಿರ್ಣಯವನ್ನು ಅಂಗೀಕರಿಸಿದ ಹಿನ್ನೆಲೆ 8 ಮಂದಿಯನ್ನು ಅಮಾನತುಗೊಳಿಸಲಾಗಿದೆ.

ನನಗೇಕೆ ಮಾತನಾಡಲು ಅವಕಾಶ ನೀಡುತ್ತಿಲ್ಲ?

ಲೋಕಸಭೆಯಲ್ಲಿ ನರವಾಣೆ ಅವರ ಅಪ್ರಕಟಿತ 'ಸ್ಮರಣೆ'ಯನ್ನು ಉಲ್ಲೇಖಿಸಿದ ಲೇಖನದ ಪ್ರತಿಯನ್ನು ರಾಹುಲ್ ಗಾಂಧಿ ದೃಢೀಕರಿಸಿದ್ದು, ಇದು ನಮ್ಮ ರಾಷ್ಟ್ರಪತಿಗಳ ಭಾಷಣದ ಕೇಂದ್ರ ಬಿಂದುವಾಗಿದೆ. ನಾನು ಹೇಳುತ್ತಿರುವುದು ಚೀನಾ ಮತ್ತು ಭಾರತದ ನಡುವೆ ಏನಾಯಿತು. ಮತ್ತು ನಮ್ಮ ಪ್ರಧಾನಿ ಅದಕ್ಕೆ ಹೇಗೆ ಪ್ರತಿಕ್ರಿಯಿಸಿದರು ಎಂಬುದಾಗಿದೆ.
ಈ ಬಗ್ಗೆ ಪ್ರಧಾನಿಯವರು ಅಂದು ಏನು ನಡೆಯಿತು ಎಂದು ಹೇಳಿಕೆ ನೀಡಲಿ. ಆದರೆ ನನ್ನನ್ನು ಯಾಕೆ ಮಾತನಾಡದಂತೆ ತಡೆಯಲಾಗುತ್ತಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಈ ಬಗ್ಗೆ ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ಕೃಷ್ಣ ಪ್ರಸಾದ್ ಟೆನ್ನೇಟಿ ಅವರು, ಅದನ್ನು ಸದನದಲ್ಲಿ ಮಂಡಿಸಿ, ಆ ಬಗ್ಗೆ ನಾವು ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.
ಸಂಸತ್​ನ ಹೊರಗೆ ಪ್ರತಿಭಟನೆ
ಲೋಕಸಭೆಯನ್ನು ನಾಳೆಗೆ ಮುಂದೂಡಿದ ಬಳಿಕ ಕಾಂಗ್ರೆಸ್ ಸಂಸದರ ಅಮಾನತು ಖಂಡಿಸಿ ಸಂಸತ್​ ಹೊರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸಿದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net