ಅವರಿಗೆ ತಮ್ಮ ತಪ್ಪಿನ ಬಗ್ಗೆ ಪಶ್ಚಾತಾಪವಿದ್ದರೆ ಅವರು ಸದನದಲ್ಲಿ ಕ್ಷಮೆಯಾಚಿಸಬಹುದಿತ್ತು, ಆದರೆ ಸಿಖ್ಖರ ಮೇಲಿನ ದ್ವೇಷದಿಂದಾಗಿ ಅವರು ಹಾಗೆ ಮಾಡಲಿಲ್ಲ. ರವನೀತ್ ಸಿಂಗ್ ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಕುಟುಂಬದ ಹಿನ್ನಲೆ ಉಳ್ಳವರು, ಅವರು ತಮ್ಮ ರಾಜಕೀಯ ದೃಷ್ಟಿಕೋನಗಳನ್ನು ಬದಲಾಯಿಸಿದ ಕಾರಣ, 'ಗದ್ದಾರ್' (ದೇಶದ್ರೋಹಿ) ಎಂದು ರಾಹುಲ್ ಕರೆದಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಯಾರಾದರೂ ನನ್ನ ನಾಗರಿಕರನ್ನು ದೇಶದ್ರೋಹಿ ಎಂದು ಕರೆದರೆ, ರಾಷ್ಟ್ರವು ಇದನ್ನು ಹೇಗೆ ಸಹಿಸಿಕೊಳ್ಳುತ್ತದೆ? ಅವರು ಸಿಖ್ ಎಂಬ ಕಾರಣಕ್ಕಾಗಿ, ಅವರು ದೇಶದ್ರೋಹಿಯೇ? ಎಂದು ಮೋದಿ ಪ್ರಶ್ನಿಸಿದ್ದಾರೆ.