"ಬಿಜೆಪಿ ನಾಯಕರ ಅಡೆತಡೆಗಳಿಂದ ಸಿಟ್ಟಾದ ರಾಹುಲ್ ಗಾಂಧಿ, "ಈ ಲೇಖನದಲ್ಲಿ ಏನಿದೆ ಎಂದು ನಿಮಗೆ ಇಷ್ಟೊಂದು ಭಯವಾಗುತ್ತಿದೆ? ನಾನು ಹೇಳುತ್ತಿರುವುದು 100% ಸತ್ಯ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ನನ್ನ ದೇಶಪ್ರೇಮವನ್ನು ಪ್ರಶ್ನಿಸಿದ್ದಕ್ಕೆ ನಾನು ಇಂದು ಈ ವಿಷಯ ಪ್ರಸ್ತಾಪಿಸುತ್ತಿದ್ದೇನೆ," ಎಂದು ಗುಡುಗಿದರು. ರಾಹುಲ್ ಅವರು 'ಚೀನಾದ ಟ್ಯಾಂಕ್ಗಳು' ಎಂಬ ಪದವನ್ನು ಬಳಸಿದಾಗ ಇಡೀ ಆಡಳಿತ ಪಕ್ಷ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿತು.