ಈ ಬೆಳವಣಿಗೆಯನ್ನು ಉಲ್ಲೇಖಿಸಿದ್ದ ಶಹಜಾದ್ ಪೂನಾವಾಲ ರೀಲ್ಸ್ವೊಂದರಲ್ಲಿ, ರಿಯಾ ಆಹಿರ್ ವೈರಲ್ ಪ್ರತಿಭಟನೆಯ ಫೋಟೋವನ್ನು ಯೋಜಿತ ರಾಜಕೀಯ ತಂತ್ರಗಾರಿಕೆ ಹಾಗೂ ಸ್ಕ್ರಿಪ್ಟೆಡ್ ಪ್ರಚಾರ ಎಂದು ಆರೋಪಿಸಿದ್ದರು. ರಾಹುಲ್ ಗಾಂಧಿ, ಸುಪ್ರಿಯಾ ಸುಳೆ, ರಾಜ್ ಠಾಕ್ರೆ ಹಾಗೂ ಡಿಂಪಲ್ ಯಾದವ್ ಅವರಂತಹ ರಾಜಕೀಯ ನಾಯಕರಿಂದ ಹಿಡಿದು ಎಡಪಂಥೀಯ ಯೂಟ್ಯೂಬರ್‌ಗಳ ಬೆಂಬಲ ಪಡೆದು, ಬಿಗ್ ಬಾಸ್ ಮನೆ ಪ್ರವೇಶಿಸಿ ಪ್ರಧಾನಿ ಮೋದಿ ವಿರೋಧಿ ಅಜೆಂಡಾ ಪ್ರಚಾರ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ, ಸಾರ್ವಜನಿಕರ ನೇರ ಮತದಾನದಲ್ಲಿ ಸೋಲುವ ಮೂಲಕ ಈ ಇಡೀ ಎಡಪಂಥೀಯ ಇಕೋಸಿಸ್ಟಮ್‌ಗೆ ಮುಖಭಂಗವಾಗಿದೆ.