ರಾಘವ ಲಾರೆನ್ಸ್ ಯೂಟರ್ನ್​; ತಿರುಚ್ಚಿ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಲ್ಲ: ರಾಜಕೀಯ ಪ್ರವೇಶ ಮುಂದೂಡಿದ ನಟ | Raghava Lawrence

ರಾಘವ ಲಾರೆನ್ಸ್
ರಾಘವ ಲಾರೆನ್ಸ್
Published on
ಚೆನ್ನೈ: ಜನಪ್ರಿಯ ತಮಿಳು ನಟ ಮತ್ತು ನೃತ್ಯ ಸಂಯೋಜಕ ರಾಘವ ಲಾರೆನ್ಸ್(Raghava Lawrence) ಅವರು ರಾಜಕೀಯದ ಯೂಟರ್ನ್ ತೆಗೆದುಕೊಂಡಿದ್ದು, ತಮ್ಮ ಪ್ರವೇಶವನ್ನು ಮುಂದೂಡಿದ್ದಾರೆ. ಮತ್ತು ಸಿಎಂ ವಿಜಯ್ ರಾಜೀನಾಮೆ ನೀಡಿರುವ ತಿರುಚ್ಚಿ ಪೂರ್ವ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಅವರು, ಟಿವಿಕೆಯಿಂದ ತಿರುಚ್ಚಿ ಪೂರ್ವ ಕ್ಷೇತ್ರದ ಉಪಚುನಾವಣೆಯಲ್ಲಿ ಟಿವಿಕೆ ಪಕ್ಷದಿಂದ ಸ್ಪರ್ಧಿಸುತ್ತಿಲ್ಲ. ವಿಜಯ್ ಸಿನಿಮಾ ನಾಯಕನಾಗಿದ್ದಾಗ ಗೋಡೆಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸಿದವರು ಮತ್ತು ರಾಜಕೀಯಕ್ಕೆ ಬಂದ ನಂತರ ಟಿವಿಕೆಯಲ್ಲಿ ವರ್ಷಗಳಿಂದ ಶ್ರಮಿಸಿದ ಅನೇಕರಿದ್ದಾರೆ. ಅವರಲ್ಲಿ ಒಬ್ಬರನ್ನು ವಿಜಯ್ ಕಣಕ್ಕಿಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ನಾನು ಈಗ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೇ ರಾಜಕೀಯ ಪ್ರವೇಶ ಮಾಡಲ್ಲ ಎಂದರ್ಥವಲ್ಲ. ಮುಂದಿನ ದಿನಗಳಲ್ಲಿ ಬಹಳ ಎಚ್ಚರಿಕೆಯಿಂದ ರಾಜಕೀಯ ಪ್ರವೇಶಿಸುತ್ತೇನೆ. ಈಗ ತಿರುಚ್ಚಿ ಪೂರ್ವದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾತ್ರ ಹೇಳುತ್ತಿದ್ದೇನೆ. ಇತರೆ ಕ್ಷೇತ್ರದಲ್ಲಿ ಸ್ಪರ್ಧಿಸಲ್ಲ ಅಂತ ಹೇಳಲ್ಲ ಎಂದಿದ್ದಾರೆ.
ಇದೇ ವೇಳೆ ತಾವು ಅಧಿಕಾರ, ಸಚಿವ ಸ್ಥಾನಕ್ಕೆ ರಾಜಕೀಯ ಪ್ರವೇಶಿಸುತ್ತಿಲ್ಲ ಎಂದಿರುವ ಲಾರೆನ್ಸ್​, ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಬರುವುದಾಗಿ ಹೇಳಿದ್ದಾರೆ. ಪ್ರಸ್ತುತ ಎರಡು ಚಿತ್ರಗಳನ್ನು ಪೂರ್ಣಗೊಳಿಸಬೇಕಾಗಿದೆ. ಮತ್ತು ಸಾಧ್ಯವಾದಷ್ಟು ಬೇಗ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net