ಆಗಸ್ಟ್ 31 ರಂದು ದೆಹಲಿಯ ತಾತ್ಕಾಲಿಕ (ಕರಡು) ಮತದಾರರ ಪಟ್ಟಿ ಬಿಡುಗಡೆಯಾಗಿತ್ತು. ಆದರೆ ಸೆಪ್ಟೆಂಬರ್ 8 ರಂದು ರಾಜೇಂದರ್ ನಗರ್ ಕ್ಷೇತ್ರದ ಮತಗಟ್ಟೆ ಸಂಖ್ಯೆ 46 ರಲ್ಲಿ, ರಾಘವ್ ಚಡ್ಡಾ ಅವರ ಹೆಸರನ್ನು 747 ನೇ ಮತದಾರರಾಗಿ ಸೇರಿಸಲಾಯಿತು. ಇತ್ತೀಚೆಗಷ್ಟೇ (ಸೆಪ್ಟೆಂಬರ್ 3 ರಂದು) ಪಂಜಾಬ್‌ನ ಮತದಾರರ ಪಟ್ಟಿಯಿಂದ ತಮ್ಮ ಹೆಸರು ತೆಗೆದುಹಾಕಿದ್ದಕ್ಕೆ ರಾಜಕೀಯ ದ್ವೇಷ ಎಂದು ಕಿಡಿಕಾರಿದ್ದ ಚಡ್ಡಾ, ಈಗ ದಿಢೀರನೆ ದೆಹಲಿ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನ ಹಾಗೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.