ರಾಘವ್ ಚಡ್ಡಾ ಅವರು, ನಾನಾ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಸದಾ ಆಕ್ಟಿವ್ ಆಗಿರುತ್ತಾರೆ. ಗಿಗ್ ಕಾರ್ಮಿಕರು ಹಾಗೂ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವವರ ಬಗ್ಗೆ, ಅಲ್ಲಿ ಕೈಗೆಟುಕುವ ದರಕ್ಕೆ ಏನೆಲ್ಲ ಸಿಗುತ್ತದೆ ಎನ್ನುವುದನ್ನು ಪ್ರಸ್ತಾಪಿಸಿ ವೈರಲ್ ಆಗಿದ್ದರು. ಈ ಮಧ್ಯೆ ಪಕ್ಷದ ಇಂತಹ ನಡೆ ಸದ್ಯ ಹಲವರಲ್ಲಿ ಕುತೂಹಲ ಕೆರಳಿಸುವಂತೆ ಮಾಡಿದೆ.