1 ದಿನದಲ್ಲಿ 10 ಲಕ್ಷ ಇನ್​ಸ್ಟಾಗ್ರಾಂ ಫಾಲೋವರ್ಸ್​ ಕಳ್ಕೊಂಡ ಚಡ್ಡಾ; ಮೆಚ್ಚಿನ ನಾಯಕನಿಗೆ ಝೆನ್​ ಜಿಗಳು ಹೀಗೆ ಮಾಡಿದ್ಯಾಕೆ?..Raghav Chadha

Raghav Chadha
Raghav Chadha
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿಗೆ ಸೇರ್ಪಡೆಯಾದ 24 ಗಂಟೆಯಲ್ಲಿ 10 ಲಕ್ಷ ಫಾಲೋವರ್ಸ್​ ಕಳ್ಕೊಂಡ ಚಡ್ಡಾ
  • ರಾಘವ್​ ಚಡ್ಡಾರ ನಡೆಗೆ ಝೆನ್​ ಜಿಗೆ ಬೇಸರ, ರಾತ್ರೋ ರಾತ್ರಿ ಅನ್​ಫಾಲೋ
  • ಇಂಟರ್​ನೆಟ್ ನಿಮ್ಮನ್ನ ಝೀರೋನೂ ಮಾಡುತ್ತೆ ಹೀರೋನೂ ಮಾಡುತ್ತೆ ಎಂದ ಎನ್‌ಸಿಪಿ ನಾಯಕ
ಹೌದು, ಪಂಜಾಬ್​ನ ಯುವ ರಾಜಕಾರಿಣಿ ರಾಘವ್​ ಚಡ್ಡಾ ಅವರು ಬಿಜೆಪಿಗೆ ಸೇರ್ಪಡೆಗೊಂಡ 24 ಗಂಟೆಯೊಳಗೆ ಬರೋಬ್ಬರಿ 1 ಮಿಲಿಯನ್​ ಅಂದರೆ, ಹತ್ತು ಲಕ್ಷ ಇನ್​ಸ್ಟಾಗ್ರಾಮ್​ ಫಾಲೋವರ್ಸ್​​ ಅನ್ನು ಕಳೆದುಕೊಂಡಿರುವುದು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಫಾಲೋವರ್ಸ್ ಎಷ್ಟು ಮುಖ್ಯ?

ಯಾವುದೇ ಸೆಲಬ್ರೆಟಿಗಳ ಬಗ್ಗೆ ಮಾತನಾಡುವಾಗ ಅವರ ಸೋಶಿಯಲ್​ ಮೀಡಿಯಾ ಅಂದರೆ, ಫೇಸ್​ಬುಕ್​, ಎಕ್ಸ್, ಇನ್​ಸ್ಟಾಗ್ರಾಮ್​ ಫಾಲೋವರ್ಸ್​​ಗಳ ಸಂಖ್ಯೆಯನ್ನು ಸಹ ಪ್ರಸ್ತುತ ಪಡಿಸಲಾಗುತ್ತದೆ. ಅವರೆಷ್ಟು ಫಾಲೋವರ್ಸ್​ ಹೊಂದಿದ್ದಾರೆ ಎನ್ನುವುದನ್ನು ಅಳೆಯಲಾಗುತ್ತದೆ. ಕಳೆದೆರೆಡು ತಿಂಗಳ ಹಿಂದೆ ಪ್ರಧಾನಿ ಮೋದಿಯವರು ನೂರು ಮಿಲಿಯನ್ ಫಾಲೋವರ್ಸ್​ಗಳನ್ನು ಪಡೆದು, ಐತಿಹಾಸಿ ಮೈಲಿಗಲ್ಲು ದಾಟಿದ್ದ ವಿಶ್ವದ ಮೊದಲ ನಾಯಕ ಎಂದು ಎನಿಸಿಕೊಂಡಿದ್ದರು.
ಇಂತಹ ಸಂದರ್ಭದಲ್ಲಿ ಝೆನ್​​ ಜಿಗಳ ಫೇವರೆಟ್​​​ ಸಂಸದರಾಗಿದ್ದ ರಾಘವ್​ ಚಡ್ಡಾ ಅವರು, ಸಾಕಷ್ಟು ಫಾಲೋವರ್ಸ್​ ಕಳೆದುಕೊಂಡಿರುವುದು..ಝೆನ್​​ಜಿಗಳಿಗೆ ಎಷ್ಟು ಅಸಮಾಧಾನವನ್ನುಂಟು ಮಾಡಿದೆ ಎನ್ನುವುದನ್ನು ಅರ್ಥೈಸಿದೆ.

ಎಷ್ಟು ಫಾಲೋವರ್ಸ್​ ಕಳೆದುಕೊಂಡಿದ್ದಾರೆ?

ರಾಘವ್​ ಚಡ್ಡಾ ಅವರು ಸಂಸತ್ತಿನಲ್ಲಿ ಗಿಗ್​ ಕಾರ್ಮಿಕರ ಹಕ್ಕುಗಳ ಬಗ್ಗೆ, ಫೋನ್​ ರೀಚಾರ್ಜ್​ ಸರಯಾಗಿ ಮೂವತ್ತು ದಿನ ಇರಬೇಕು ಎನ್ನುವ ಬಗ್ಗೆ, ಬ್ಯಾಂಕ್​ ದಂಡಗಳಂತಹ ವಿಚಾರದ ಬಗ್ಗೆ ಮಾತನಾಡಿ ಝೆನ್​ ಜಿಗಳ ಮನಸ್ಸನ್ನು ಗೆದ್ದುಕೊಂಡಿದ್ದರು.
ಶುಕ್ರವಾರ ರಾಘವ್​ ಚಡ್ಡಾ ಅವರು ಬಿಜೆಪಿಗೆ ಸೇರಿದ ಬಗ್ಗೆ ಸುದ್ದಿಯಾಗುತ್ತಲೇ ಶನಿವಾರ ಮಧ್ಯಾಹ್ನದ ವೇಳೆಗೆ ಈ ಸಂಖ್ಯೆ 13.5 ಮಿಲಿಯನ್‌ಗೆ ಇಳಿಕೆಯಾಗಿದೆ. ಈ ಮೊದಲು ಅವರಿಗೆ 14.6 ಮಿಲಿಯನ್ ಫಾಲೋವರ್ಸ್​ ಹೊಂದಿದ್ದರು. ಯುವಜನರೇ ಅವರನ್ನು ಅನ್​ಫಾಲೋ ಮಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಎನ್​ಸಿಪಿ ನಾಯಕ ಏನಂದ್ರು?
ಝೆನ್​ಜಿಗಳ ಅನ್​ಫಾಲೋದಿಂದಾಗಿ 24 ಗಂಟೆಯಲ್ಲಿ 10 ಲಕ್ಷದಷ್ಟು ಜನರನ್ನು ರಾಘವ್​ ಚಡ್ಡಾ ಕಳೆದುಕೊಂಡಿದ್ದಾರೆ. ಇದು ಆಧುನಿಕ ಕಾಲಘಟ್ಟ. ಹೀಗಾಗಿ, ನಿಮ್ಮನ್ನು ಇಂಟರ್ನೆಟ್ ರಾತ್ರೋರಾತ್ರಿ ಹೀರೋನು ಮಾಡುತ್ತೇ, ಜೊತೆಗೆ ರಾತ್ರೋರಾತ್ರಿ ಝೀರೋನೂ ಮಾಡುತ್ತದೆ ಎಂದು ಎಂದು ಎನ್‌ಸಿಪಿ (ಎಸ್‌ಪಿ) ವಕ್ತಾರ ಅನೀಶ್ ಗವಾಂಡೆ ಎಕ್ಸ್​ನಲ್ಲಿ ಟ್ವೀಟ್ ಮಾಡಿದ್ದಾರೆ.

ಚಡ್ಡಾ ಎಂದರೆ ಯಾಕಿಷ್ಟ?

ರಾಘವ್​ ಚಡ್ಡಾ ಸಂಸತ್​ನಲ್ಲಿ ಟ್ರಾಫಿಕ್​ ಸಮಸ್ಯೆ, ಗಿಗ್​ ಕಾರ್ಮಿಕರ ಹಕ್ಕುಗಳ ಬಗ್ಗೆ, ಪಿತೃತ್ವ ರಜೆ ಬಗ್ಗೆ ಮಾತನಾಡಿದ್ದರು. ಜೊತೆಗೆ ವಿಮಾನ ನಿಲ್ದಾಣದಲ್ಲಿ ಜನರಿಗೆ ಕೈಗೆಟುಕವ ದರದಲ್ಲಿ ಆಹಾರ ಪದಾರ್ಥಗಳು ಸಿಗಬೇಕು ಎಂದು ಮನದಟ್ಟು ಮಾಡಿದ್ದರು. ಟೆಲಿಕಾಂ ಕಂಪನಿಗಳ ಡೇಟಾ ಮಿತಿ ಬಗ್ಗೆ, ಬ್ಯಾಂಕ್ ದಂಡದಂತಹ ಸಾಮಾನ್ಯ ಜನರ ಸಂಕಷ್ಟದ ಮಾತನಾಡಿದ್ದರು. ಅವರ ಈ ವಿಚಾರಧಾರಣೆಗಳು ಯುವ ಮನಸ್ಸನ್ನು ಗೆದ್ದುಕೊಂಡಿತ್ತು. ಆದರೆ, ರಾಘವ್​ ಚಡ್ಡಾರ ಪಕ್ಷಾಂತರ ನಿರ್ಧಾರ ಝೆನ್​ ಜಿ ಜನಾಂಗಕ್ಕೆ ದ್ರೋಹದಂತೆ ಕಂಡಿದೆ. ಹೀಗಾಗಿ ಅನ್​ ಫಾಲೋ ಮಾಡಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net