ರಾಜ್ಯಸಭೆಯಲ್ಲಿ ಮಾತನಾಡಿರುವ ಅವರು, ಟೆಲಿಕಾಂ ಕಂಪನಿಗಳು ದಿನಕ್ಕೆ 1.5GB, 2GB, ಅಥವಾ 3GB ಯಂತಹ 'ದೈನಂದಿನ ಡೇಟಾ ಮಿತಿ'ಗಳೊಂದಿಗೆ ರೀಚಾರ್ಜ್ ಯೋಜನೆಗಳನ್ನು ನೀಡುತ್ತವೆ. ಪ್ರತಿ 24 ಗಂಟೆಗಳಿಗೊಮ್ಮೆ ಡೇಟಾವನ್ನು ಮರುಹೊಂದಿಸುತ್ತವೆ. 2 ಜಿಬಿಯಲ್ಲಿ 1.5 ಜಿಬಿ ಡೇಟಾ ಬಳಿಸಿ 500ಎಂಬಿ ಉಳಿದ್ರೆ, ಅದನ್ನು ಮಾರನೇ ದಿನ ಬಳಸಲಾಗಲ್ಲ. ಬಳಕೆಯಾಗದ ಡೇಟಾವು ಸಂಪೂರ್ಣವಾಗಿ ಪಾವತಿಸಲ್ಪಟ್ಟಿದ್ದರೂ ಮಧ್ಯರಾತ್ರಿಯಲ್ಲಿ ಮುಕ್ತಾಯಗೊಳ್ಳುತ್ತದೆ.