ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ ಕತಾರ್​ ಮ್ಯೂಸಿಯಂ-ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ! NMACC

ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ  ಇಶಾ ಅಂಬಾನಿ ಹಾಗೂ ಕತಾರ್​ ವಸ್ತುಸಂಗ್ರಹಾಲಯಗಳ ಅಧ್ಯಕ್ಷೆ​ ಹೆರ್ ಎಕ್ಸಲೆನ್ಸಿ ಶೇಖಾ ಅಲ್-ಮಯಸ್ಸಾ ಬಿಂತ್ ಹಮದ್ ಬಿನ್ ಖಲೀಫಾ ಅಲ್ ಥಾನಿ
ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ ಇಶಾ ಅಂಬಾನಿ ಹಾಗೂ ಕತಾರ್​ ವಸ್ತುಸಂಗ್ರಹಾಲಯಗಳ ಅಧ್ಯಕ್ಷೆ​ ಹೆರ್ ಎಕ್ಸಲೆನ್ಸಿ ಶೇಖಾ ಅಲ್-ಮಯಸ್ಸಾ ಬಿಂತ್ ಹಮದ್ ಬಿನ್ ಖಲೀಫಾ ಅಲ್ ಥಾನಿ
Published on
ನವದೆಹಲಿ: ಕತಾರ್ ವಸ್ತುಸಂಗ್ರಹಾಲಯಗಳು ಮತ್ತು ದೇಶದ ನಂಬರ್​ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಅವರ ಪುತ್ರಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ ಇಶಾ ಮುಕೇಶ್ ಅಂಬಾನಿಯ ಸಾಂಸ್ಕೃತಿಕ ಕೇಂದ್ರ (Nita Mukesh Ambani Cultural Centre - NMACC) ದ ನಡುವೆ ಐತಿಹಾಸಿಕ ಒಪ್ಪಂದ ನಡೆದಿದೆ. 
ಕತಾರ್​ ವಸ್ತುಸಂಗ್ರಹಾಲಯಗಳ ಅಧ್ಯಕ್ಷೆ​ ಹೆರ್ ಎಕ್ಸಲೆನ್ಸಿ ಶೇಖಾ ಅಲ್-ಮಯಸ್ಸಾ ಬಿಂತ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಮತ್ತು ಇಶಾ ಅಂಬಾನಿ ನಡುವೆ 2025, ಡಿಸೆಂಬರ್ 22ರಂದು ದೋಹಾದ ನ್ಯಾಷನಲ್ ಮ್ಯೂಸಿಯಂ ಆಫ್ ಕತಾರ್‌ನಲ್ಲಿ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಒಪ್ಪಂದದ ಉದ್ದೇಶ ಏನು?

ಭಾರತ ಮತ್ತು ಕತಾರ್‌ನಲ್ಲಿ ಮ್ಯೂಸಿಯಂ-ಇನ್-ರೆಸಿಡೆನ್ಸ್ ಎಜುಕೇಷನಲ್ ಪ್ರೋಗ್ರಾಂಗಳನ್ನು ಅಭಿವೃದ್ಧಿಪಡಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ. ಈ ಒಪ್ಪಂದದ ಅಡಿಯಲ್ಲಿ ಮಕ್ಕಳಿಗೆ ಆಟದ ಮೂಲಕ ಕಲಿಸುವುದು, ವಸ್ತುಸಂಗ್ರಹಾಲಯ ಆಧಾರಿತ ಶಿಕ್ಷಣ ಒದಗಿಸುವುದು. ಶಿಕ್ಷಕರು ಮತ್ತು ಸ್ವಯಂಸೇವಕರಿಗೆ ಹೊಸ ಉಪಕರಣಗಳು, ವಿಧಾನಗಳು ಮತ್ತು ಮಾಸ್ಟರ್‌ಕ್ಲಾಸ್‌ಗಳ ಮೂಲಕ ಸರಿಯಾಗ ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ.
ಕತಾರ್‌ನ ದಾದು ಚಿಲ್ಡ್ರನ್ಸ್ ಮ್ಯೂಸಿಯಂನ ತಜ್ಞರು ಭಾರತದಲ್ಲಿ ಈ ತರಬೇತಿ ನೀಡಲಿದ್ದಾರೆ. ಭಾರತದಲ್ಲಿ ರಿಲಯನ್ಸ್ ಫೌಂಡೇಶನ್‌ ಸಹಕಾರದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಈ ಕಾರ್ಯಕ್ರಮಗಳನ್ನು ವಿಸ್ತರಿಸಲಾಗುತ್ತದೆ. ಅಂದಹಾಗೆ, ಕತಾರ್ ನ್ಯಾಷನಲ್ ವಿಷನ್ 2030ರ ಭಾಗವಾಗಿ ಮತ್ತು ಭಾರತ-ಕತಾರ್ ಸಾಂಸ್ಕೃತಿಕ ವರ್ಷದ ಪರಂಪರೆಯಾಗಿ ಈ ಒಪ್ಪಂದವನ್ನು ಪರಿಗಣಿಸಲಾಗಿದೆ.
ಇನ್ನೂ ಇಶಾ ಅಂಬಾನಿಯವರು ಈ ಒಪ್ಪಂದದ ಮೂಲಕ ಜಾಗತಿಕ ಐಡಿಯಾಗಳನ್ನು ಭಾರತಕ್ಕೆ ತರುವ ಮತ್ತು ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಹಂಚುವ ಗುರಿಯನ್ನು ಹೊಂದಿದ್ದಾರೆ. ಈ ಒಪ್ಪಂದವು ಭಾರತ ಮತ್ತು ಕತಾರ್ ನಡುವಿನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಹಕಾರವನ್ನು ಬಲಪಡಿಸುತ್ತದೆ. 
ಈ ವಿಚಾರವಾಗಿ ಮಾತನಾಡಿದ ಇಶಾ ಅಂಬಾನಿ, ಮಕ್ಕಳು ಮತ್ತು ಅವರ ಶಿಕ್ಷಣದ ಮೇಲೆ ಕೇಂದ್ರೀಕರಿಸಿದ ಈ ಅರ್ಥಪೂರ್ಣ ಒಪ್ಪಂದದೊಂದಿಗೆ ನಮ್ಮ ಎನ್​ಎಂಎಸಿಸಿ ಹಾಗೂ ಹಮದ್ ಬಿನ್ ಖಲೀಫಾ ಅಲ್ ಥಾನಿ ಮತ್ತು ಕತಾರ್ ವಸ್ತುಸಂಗ್ರಹಾಲಯಗಳೊಂದಿಗೆ ಪಾಲುದಾರಿಕೆ ಹೊಂದಲು ಸಂತೋಷಪಡುತ್ತೇವೆ. NMACC ಯಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವಾಗ ಜಾಗತಿಕ ವಿಚಾರಗಳನ್ನು ಭಾರತಕ್ಕೆ ತರಲು ಮತ್ತು ಯುವಜನರಿಗೆ ವಿಶ್ವ ದರ್ಜೆಯ ಶೈಕ್ಷಣಿಕ ಅನುಭವಗಳನ್ನು ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.
ಹಮದ್ ಬಿನ್ ಖಲೀಫಾ ಅಲ್ ಥಾನಿ ಮಾತನಾಡಿ, ಕಲಿಕೆಯಲ್ಲಿ ಹೊಸ ಪೀಳಿಗೆಯನ್ನು ರೂಪಿಸುವಲ್ಲಿ ಸೃಜನಶೀಲತೆ ಮತ್ತು ಸಾಂಸ್ಕೃತಿಕ ವಿನಿಮಯುವು ಬಹಳ ಮುಖ್ಯ ಎಂಬ ನಂಬಿಕೆಯನ್ನು ಕತಾರ್ ವಸ್ತುಸಂಗ್ರಹಾಲಯಗಳು ಮತ್ತು NMACC ಹಂಚಿಕೊಳ್ಳುತ್ತವೆ. ಶ್ರೀಮತಿ ಇಶಾ ಅಂಬಾನಿ ನೇತೃತ್ವದ ಈ ಸಹಯೋಗದ ಮೂಲಕ, ಭಾರತದೊಂದಿಗೆ ನಮ್ಮ ಸಾಂಸ್ಕೃತಿಕ ಪರಂಪರೆಯಾಗಿ, ಕತಾರ್ ವಸ್ತುಸಂಗ್ರಹಾಲಯಗಳು ಅತ್ಯುತ್ತಮ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಕೊಡುಗೆ ನೀಡುತ್ತವೆ ಎಂದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net