ಪುಟಿನ್-ಮೋದಿ ಭೇಟಿ, ಜಗತ್ತಿಗೆ ನೇರ ಸಂದೇಶ: ರಷ್ಯಾ-ಭಾರತ ಸಂಬಂಧಗಳ ಕುರಿತು ಚೀನಾದ ಗ್ಲೋಬಲ್ ಟೈಮ್ಸ್ ವರದಿ!

Putin-Modi
Putin-Modi
Published on

ಪ್ರಮುಖ ಮುಖ್ಯಾಂಶಗಳು

  • ರಷ್ಯಾ-ಭಾರತ ಸಂಬಂಧಗಳ ಕುರಿತು ಚೀನಾದ ಗ್ಲೋಬಲ್ ಟೈಮ್ಸ್ ವರದಿ
  • 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ
ನವದೆಹಲಿ: 23ನೇ ಇಂಡೋ-ರಷ್ಯಾ ವಾರ್ಷಿಕ ಶೃಂಗಸಭೆ ಹಿನ್ನಲೆ ರಷ್ಯಾ ಅಧ್ಯಕ್ಷ ಪುಟಿನ್(Vladimir Putin) ಗುರುವಾರ(ಡಿ.4) ಸಂಜೆ 6:35 ರ ದೆಹಲಿಗೆ ಬಂದಿಳಿದಿದ್ದಾರೆ.
ರಷ್ಯಾ ಅಧ್ಯಕ್ಷರನ್ನು ಪಾಲಂ ವಿಮಾನ ನಿಲ್ದಾಣದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಬರಮಾಡಿಕೊಂಡರು. ಇದರ ನಂತರ, ಪ್ರಧಾನಿ ಮೋದಿ ಮತ್ತು ಪುಟಿನ್ ಒಂದೇ ಕಾರಿನಲ್ಲಿ 7 ಲೋಕ ಕಲ್ಯಾಣ್ ಮಾರ್ಗ್‌ಗೆ ಒಟ್ಟಿಗೆ ತಲುಪಿದರು, ಅಲ್ಲಿ ಅವರ ಗೌರವಾರ್ಥವಾಗಿ ಭಾರತೀಯ ಮತ್ತು ರಷ್ಯಾದ ಧ್ವಜಗಳು ಮತ್ತು ವಿಶೇಷ ಬೆಳಕಿನಿಂದ ಅಲಂಕರಿಸಲ್ಪಟ್ಟ ಪ್ರಧಾನಿ ನಿವಾಸದಲ್ಲಿ ವಿಶೇಷ ಭೋಜನವನ್ನು ಆಯೋಜಿಸಲಾಗಿತ್ತು.
ನನ್ನ ಸ್ನೇಹಿತ ಅಧ್ಯಕ್ಷ ಪುಟಿನ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ. ಇಂದು ಸಂಜೆ ಮತ್ತು ನಾಳೆ ನಮ್ಮ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆ. ಭಾರತ-ರಷ್ಯಾ ಸ್ನೇಹವು ಕಾಲಾತೀತವಾಗಿದ್ದು, ಇದು ನಮ್ಮ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಗ್ಲೋಬಲ್ ಟೈಮ್ಸ್ ಹೇಳಿದ್ದೇನು..?

ರಾಜತಾಂತ್ರಿಕ ದೃಷ್ಟಿಕೋನದಿಂದ, ಈ ಭೇಟಿ ಇನ್ನೂ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಈ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಚೀನಾದ ಪತ್ರಿಕೆ ಗ್ಲೋಬಲ್ ಟೈಮ್ಸ್, ಭಾರತ ಮತ್ತು ರಷ್ಯಾ ಒಟ್ಟಾಗಿ ಯಾವುದೇ ದೇಶಗಳು ಪ್ರತ್ಯೇಕವಾಗಿಲ್ಲ ಮತ್ತು ಎರಡೂ ದೇಶಗಳ ಮೇಲಿನ ಪಾಶ್ಚಿಮಾತ್ಯ ನಿರ್ಬಂಧಗಳು ಮತ್ತು ಒತ್ತಡವು ಯಶಸ್ವಿಯಾಗುವ ಸಾಧ್ಯತೆಯಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ರವಾನಿಸಿವೆ ಎಂದು ಹೇಳಿದೆ.
ಪುಟಿನ್ ಇಂದು ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ಸ್ವಾಗತವನ್ನು ಪಡೆಯಲಿದ್ದಾರೆ. ನಂತರ ಹೈದರಾಬಾದ್ ಹೌಸ್‌ನಲ್ಲಿ ಮಾತುಕತೆ ಮತ್ತು ಜಂಟಿ ಹೇಳಿಕೆಯನ್ನು ನೀಡಲಾಗುತ್ತದೆ. ಈ ಮಹತ್ವದ ಭೇಟಿಯ ಬಳಿಕ ಸಂಜೆ ಅಧ್ಯಕ್ಷೆ ದ್ರೌಪದಿ ಮುರ್ಮು ಅವರೊಂದಿಗಿನ ಸಭೆ ಮತ್ತು ಔತಣಕೂಟದೊಂದಿಗೆ ಅಂತ್ಯಗೊಳ್ಳಲಿದೆ.

23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ

ನಾಲ್ಕು ವರ್ಷಗಳಲ್ಲಿ ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿರುವ ಪುಟಿನ್ ಡಿಸೆಂಬರ್ 5 ರವರೆಗೆ ನವದೆಹಲಿಯಲ್ಲಿ ಇರುತ್ತಾರೆ. ತಮ್ಮ ಭೇಟಿಯ ಸಮಯದಲ್ಲಿ, ರಷ್ಯಾದ ಅಧ್ಯಕ್ಷರು ಪ್ರಧಾನಿ ಮೋದಿಯವರೊಂದಿಗೆ 23 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯನ್ನು ಸಹ ನಡೆಸಲಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net