ತಮ್ಮ ಇನ್ಸ್ಟಾ ಖಾತೆ ಮಾಯವಾಗುವ ಮೊದಲು ಅಶ್ವನಿ ಅವರು 285,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು ಮತ್ತು 100 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಮಾಡಿದ್ದರು. ಪರ್ಪಲ್ ಹಾಲ್ಸಿಯಾನ್ ಹೆಸರಿನಲ್ಲಿ, ಅಶ್ವನಿ ಎ ಪ್ರಯಾಣ, ಫ್ಯಾಷನ್ ಮತ್ತು ಜೀವನಶೈಲಿಯನ್ನು ಕೇಂದ್ರವಾಗಿಟ್ಟುಕೊಂಡು ವಿಡಿಯೋಗಳನ್ನು ಮಾಡುತ್ತಿದ್ದರು. ಇನ್ಸ್ಟಾಗ್ರಾಂನ ಸಬ್ಸ್ಕ್ರೈಬರ್ಸ್ ಫೀಚರ್ ಮೇಲೆ ಮೇಲೆ ಹೆಚ್ಚು ಗಮನಹರಿಸಿದ್ದರು. ಈ ಫೀಚರ್ನಲ್ಲಿ ಸಾಮಾನ್ಯ ಪ್ರೇಕ್ಷಕರಿಗೆ ಗೋಚರಿಸದ ವಿಶೇಷ ಪೋಸ್ಟ್‌ಗಳು, ಕಥೆಗಳು ಮತ್ತು ರೀಲ್‌ಗಳನ್ನು ನೋಡಲು ಸಬ್ಸ್ಕ್ರೈಬ್ ಆದವರಿಗೆ ಅನುವು ಮಾಡಿಕೊಡುತ್ತದೆ. ಆದರೆ, ಸಬ್ಸ್ಕ್ರೈಬ್ ಮಾಡಿಕೊಳ್ಳುವವರು ಮಾಸಿಕ ಶುಲ್ಕವನ್ನು ಪಾವತಿಸಬೇಕು.