ಕಳೆದ ವರ್ಷಗಳ ರಥಯಾತ್ರೆಯ ಸಂದರ್ಭದಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮುಂಚಿತವಾಗಿಯೇ ವಿಶೇಷ ತಂತ್ರ ರೂಪಿಸಿದ್ದರು. ಸಾಮಾನ್ಯ ರಥಯಾತ್ರೆಯ ಭದ್ರತೆಯ ಜೊತೆಗೆ, ಕಳ್ಳರನ್ನು ಹಿಡಿಯಲೆಂದೇ ವಿಶೇಷ ತಂಡವನ್ನು ನಿಯೋಜಿಸಲಾಗಿತ್ತು. ಪಟ್ಟಣದ ಅತ್ಯಂತ ಜನನಿಬಿಡ ಪ್ರದೇಶಗಳಾದ ಗ್ರಾಂಡ್ ರೋಡ್, ಜಗನ್ನಾಥ ದೇವಾಲಯದ ಸುತ್ತಮುತ್ತಲಿನ ಆವರಣ, ಪುರಿ ಬೀಚ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ಸ್ಥಳೀಯ ಪೊಲೀಸರು ಹಾಗೂ ವಿಶೇಷ ನಿಗಾ ತಂಡದ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಈ ಸಿಬ್ಬಂದಿಗಳು ಶಿಫ್ಟ್‌ಗಳ ಆಧಾರದ ಮೇಲೆ ಹಗಲು-ರಾತ್ರಿ ಎನ್ನದೆ 24 ಗಂಟೆಯೂ ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದಾರೆ.