ಟೆಕ್ಸಾಸ್​ನಲ್ಲಿ ಭಾರತೀಯ ತಂದೆ-ತಾಯಿ ಮತ್ತು ಅಜ್ಜಿಯನ್ನು ಗುಂಡಿಟ್ಟು ಕೊಲೆಗೈದ ಪಂಜಾಬ್ ಮೂಲದ​​ ಯುವಕ; ಬಂಧನ | shooting dead

ಬಂಧಿತನಾಗಿರುವ ಆರೋಪಿ ಗೌರವ್ ಚೋಪ್ರಾ
ಬಂಧಿತನಾಗಿರುವ ಆರೋಪಿ ಗೌರವ್ ಚೋಪ್ರಾ
Published on
ವಾಷಿಂಗ್ಟನ್​: ಅಮೆರಿಕಾದ ಟೆಕ್ಸಾಸ್​ನಲ್ಲಿ ಪಂಜಾಬ್​ ಮೂಲದ 19 ವರ್ಷದ ಯುವಕನೊಬ್ಬನನ್ನು ಆತನ ತಂದೆ-ತಾಯಿ, ಅಜ್ಜಿಯನ್ನು ಮನೆಯಲ್ಲಿಯೇ ಗುಂಡಿಟ್ಟು ಕೊಲೆ(shooting dead) ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಶನಿವಾರ(ಜೂ. 20) ವರದಿಯಾಗಿದೆ.
ಆರೋಪಿಯನ್ನು ಗೌರವ್ ಚೋಪ್ರಾ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಯನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಅಧಿಕಾರಿಗಳು ಅವನ ಮೇಲೆ ಬಹು ವ್ಯಕ್ತಿಗಳ ಕೊಲೆ, ಕೊಲೆಗೆ ಯತ್ನಿಸಿದ ಆರೋಪ, ಬಂಧನದಿಂದ ತಪ್ಪಿಸಿಕೊಳ್ಳುವುದು ಹಾಗೂ ಹಲ್ಲೆಯ ಆರೋಪವನ್ನು ಹೊರಿಸಿದ್ದಾರೆ.
ಇನ್ನೂ ಮೃತರನ್ನು ಅವರ ತಂದೆ ಸ್ವೀತಾ ರಾಮ್ (56), ತಾಯಿ ಕಮಲೇಶ್ ರಾಣಿ (46) ಮತ್ತು ಅಜ್ಜಿ ಮೊಹಿಂದರ್ ಕೌರ್ (73) ಎಂದು ಗುರುತಿಸಲಾಗಿದೆ. ಮೂವರೂ ತಲೆಗೆ ಬಿದ್ದ ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಇನ್ನೂ ಸಹೋದರನಿಗೂ ಗುಂಡೇಟು ಬಿದ್ದಿದ್ದು, ಆದರೆ ಬದುಕುಳಿದಿದ್ದಾನೆ ಎನ್ನಲಾಗಿದೆ.
ಅಧಿಕಾರಿಗಳ ಪ್ರಕಾರ, ಆರೋಪಿ ಚೋಪ್ರಾ ತನ್ನ ಅಣ್ಣನ ಮೇಲೆ ಗುಂಡು ಹಾರಿಸಿದನೆಂದು ಹೇಳಲಾಗುತ್ತದೆ. ಆತನು ಅದರಿಂದ ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಹತ್ಯೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಚೋಪ್ರಾ ಟೆಕ್ಸಾಸ್ ರಿಯೊ ಗ್ರಾಂಡೆ ವ್ಯಾಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ತನಿಖಾಧಿಕಾರಿಗಳು ಆಪಾದಿತ ದಾಳಿಗೆ ಕಾರಣವೇನು ಎಂಬುದನ್ನು ಪರಿಶೀಲಿಸುತ್ತಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net