ಪಂಜಾಬ್‌ನಿಂದ ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ಚಲನವಲನದ ದೃಶ್ಯ ರವಾನೆ; ಆರೋಪಿ ಬಂಧನ!..Pathankot

 Punjab Spy Network
Punjab Spy Network
Published on

ಪ್ರಮುಖ ಮುಖ್ಯಾಂಶಗಳು

  • ಪಠಾಣ್‌ಕೋಟ್-ಜಮ್ಮು ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಸಿಸಿಟಿವಿ ಅಳವಡಿಸಿ ಭಾರತೀಯ ಸೇನೆಯ ಮಾಹಿತಿ ರವಾನೆ
  • ಚಕ್ ಧರಿವಾಲ್ ಗ್ರಾಮದ ನಿವಾಸಿ ಬಲ್ಜೀತ್ ಸಿಂಗ್ ಅಲಿಯಾಸ್ ಬಿಟ್ಟು ಪೊಲೀಸರ ವಶಕ್ಕೆ
  • ದುಬೈನಲ್ಲಿರುವ ಅಪರಿಚಿತ ವ್ಯಕ್ತಿಯಿಂದ 40 ಸಾವಿರ ಹಣ ಪಡೆದುಕೊಳ್ಳುತ್ತಿದ್ದ ಬಿಟ್ಟು
 Punjab Spy Network: ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗಳ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಹ್ಯಾಂಡ್ಲರ್​ಗಳಿಗೆ ಹಂಚಿಕೊಳ್ಳುತ್ತಿದ್ದ  ಚಕ್ ಧರಿವಾಲ್ ಗ್ರಾಮದ ನಿವಾಸಿ ಬಲ್ಜೀತ್ ಸಿಂಗ್ ಅಲಿಯಾಸ್ ಬಿಟ್ಟು (Baljit Singh)ಎಂಬಾತನನ್ನು  ಪೊಲೀಸರು ಬಂಧಿಸಿದ್ದಾರೆ. 

ನಾಲ್ವರ ಬಂಧನ

ಪಠಾಣ್‌ಕೋಟ್-ಜಮ್ಮು ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ಸಿಸಿಟಿವಿ ಹೆದ್ದಾರಿ-44ಯಲ್ಲಿ ಅನುಮಾನಸ್ಪದ ಘಟನೆಗಳು ನಡೆಯುತ್ತಿವೆ ಎಂಬ ಮಾಹಿತಿಯನ್ನು ಗುಪ್ತಚರ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಕಾರ್ಯಪ್ರವೃತ್ತರಾದ ಸುಜಾನ್‌ಪುರ ಪೊಲೀಸರು ಕಾರ್ಯಾಚರಣೆ ನಡೆಸಿ, ಬಲ್ಜೀತ್ ಸಿಂಗ್ ಅಲಿಯಾಸ್ ಬಿಟ್ಟು ವಿಕ್ರಮಜೀತ್ ಸಿಂಗ್ ಅಲಿಯಾಸ್ ವಿಕ್ಕಾ, ಬಲ್ವಿಂದರ್ ಸಿಂಗ್ ಅಲಿಯಾಸ್ ವಿಕ್ಕಿ ಮತ್ತು ತರಣ್‌ಪ್ರೀತ್ ಸಿಂಗ್ ಅಲಿಯಾಸ್ ಎಂಬಾತನನ್ನು ಬಂಧಿಸಿದ್ದಾರೆ.  ಉಳಿದ ಆರೋಪಿಗಳ ಬಂಧನಕ್ಕಾಗಿ ತನಿಖೆ ಮುಂದುವರೆದಿದ್ದು, ಹಣಕಾಸಿನ ಮೂಲವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ ಎನ್ನಲಾಗಿದೆ.

ಏನಿದು ಘಟನೆ?

ಬಲ್ಜೀತ್ ಸಿಂಗ್ ಅಲಿಯಾಸ್ ಬಿಟ್ಟು ಪಠಾಣ್‌ಕೋಟ್-ಜಮ್ಮು ರಾಷ್ಟ್ರೀಯ ಹೆದ್ದಾರಿ-44 ರಲ್ಲಿ  ಸೇತುವೆಯೊಂದರ ಸಮೀಪವಿರುವ ಅಂಗಡಿಯೊಂದರಲ್ಲಿ ಸಿಸಿ ಕ್ಯಾಮೆರ ಅಳವಡಿಸಿ, ಆ ಮೂಲಕ ಸೇನಾ ಪಡೆಗಳ ಚಲನವಲನದಂತಹ ಸೂಕ್ಷ್ಮ ವಿಚಾರಗಳ ಮಾಹಿತಿಯನ್ನು ತಲುಪಿಸುತ್ತಿದ್ದ ಎನ್ನಲಾಗಿದೆ

ಪೊಲೀಸರು ಹೇಳಿದ್ದೇನು? 

ಹಿರಿಯ ಪೊಲೀಸ್ ಅಧಿಕಾರಿ ದಲ್ಜಿಂದರ್ ಸಿಂಗ್ ಧಿಲ್ಲೋನ್  ಮಾತನಾಡಿ, ಸಿಸಿಟಿವಿ ಮೂಲಕ ಸೆರೆ ಹಿಡಿದ ಮಾಹಿತಿಯನ್ನು ಪಾಕಿಸ್ತಾನ ಮತ್ತು ವಿದೇಶಗಳಲ್ಲಿರುವ ಆಪರೇಟಿವ್‌ಗಳಿಗೆ ಇಂಟರ್​ನೆಟ್​ ಮೂಲಕ ರವಾನಿಸುತ್ತಿದ್ದ ಎಂಬುದು ತಿಳಿದುಬಂದಿದೆ ಎಂದು ಹೇಳಿದರು. 

 ಬಲ್ಜೀತ್ ಸಿಂಗ್ ವಿಚಾರಣೆ ವೇಳೆ ಹೇಳಿದ್ದು ಹೀಗೆ..

ಕಳೆದ ಜನವರಿಯಲ್ಲಿ ಸುಜಾನ್‌ಪುರ ಬಳಿಯ ಹೆದ್ದಾರಿಯ ಅಂಗಡಿಯೊಂದರಲ್ಲಿ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾಗಿ ಹೇಳಿಕೊಂಡಿದ್ದು, ದುಬೈನಲ್ಲಿರುವ ಅಪರಿಚಿತ ವ್ಯಕ್ತಿಯೊಬ್ಬನ ನಿರ್ದೇಶನದ ಮೇರೆಗೆ  ಮಾಹಿತಿ ನೀಡಲಾಗುತ್ತಿತ್ತು. ಆತ 40,000 ಹಣ ನೀಡುತ್ತಿದ್ದ ಎಂದು ಬಾಯ್ಬಿಟ್ಟಿರುವುದಾಗಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಬಲ್ಜಿತ್​ ಸಿಂಗ್ ಬಳಕೆ ಮಾಡುತ್ತಿದ್ದ ಸಿಸಿಟಿವಿ ಕ್ಯಾಮೆರಾ ಮತ್ತು ಇಂಟರ್ನೆಟ್ ವೈಫೈ ರೂಟರ್ ಅನ್ನು ಪಂಜಾಬ್​ಪೊಲೀಸರು ವಶಪಡಿಸಿಕೊಂಡಿದ್ದಾರೆ. 
ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್(ಐಎಸ್​ಐ) ಕಳೆದ ತಿಂಗಳಷ್ಟೇ   ಎರಡು ಹೈಟೆಕ್  ಬೇಹುಗಾರಿಕೆ ಮಾಡ್ಯೂಲ್​ಗಳನ್ನು ಧ್ವಂಸಗೊಳಿಸಿದ್ದರು. ಚೀನಾ ನಿರ್ಮಿತ, ಸೌರಶಕ್ತಿ ಚಾಲಿತ ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಿ ಸೇನಾ ನೆಲೆಗಳ ನೇರ ದೃಶ್ಯಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿತ್ತು. ಜಲಂಧರ್ ಮತ್ತು ಕಪುರ್ತಲಾದಲ್ಲಿ ನಡೆದ ಜಂಟಿ ಕಾರ್ಯಾಚರಣೆಗಳಲ್ಲಿ ಇಂತಹ ಚೀನೀ 4G ಸಿಸಿಟಿವಿ ಕ್ಯಾಮೆರಾಗಳು, ಸೋಲಾರ್ ಪ್ಲೇಟ್‌ಗಳು ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಸಿಸಿಟಿವಿ ವಿಶೇಷತೆ ಹೀಗಿದೆ

ವೈರಿಂಗ್ ವ್ಯವಸ್ಥೆ ಇಲ್ಲದೆ, ಕೇವಲ 4G ಕನೆಕ್ಟಿವಿಟಿ ಮತ್ತು ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಈ ಚೀನೀ ಕ್ಯಾಮೆರಾಗಳು ಆಫ್-ಗ್ರಿಡ್ ಕಣ್ಗಾವಲಿಗೆ ಸೂಕ್ತವಾಗಿವೆ. ಇವುಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಿ, ಮೊಬೈಲ್ ಆಪ್‌ಗಳ ಮೂಲಕ ಪಾಕಿಸ್ತಾನದ ಹ್ಯಾಂಡ್ಲರ್‌ಗಳಿಗೆ ಲೈವ್ ಫೂಟೇಜ್ ಕಳುಹಿಸಲಾಗುತ್ತಿತ್ತು" ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಈ ಹಿಂದೆ ತಿಳಿಸಿದ್ದರು. 
ಈ ಪ್ರಕರಣಗಳ ತನಿಖೆಯ ವೇಳೆ 'ಫೌಜಿ' ಎಂಬ ಪಾಕಿಸ್ತಾನಿ ಹ್ಯಾಂಡ್ಲರ್ ಕ್ಯಾಮೆರಾ ಅಳವಡಿಕೆಗೆ 35,000 ರೂಪಾಯಿ ನೀಡಿದ್ದ ಮತ್ತು ಡ್ರೋನ್ ಮೂಲಕ ಕಳುಹಿಸಲಾದ 1 ಕೆಜಿ ಹೆರಾಯಿನ್ ವಿತರಿಸಲು ಸಂದೀಪ್ ಎಂಬ ಆರೋಪಿಗೆ  50,000 ರೂಪಾಯಿ ಹಣ ನೀಡಿದ್ದ ಸಂಗತಿಯೂ ಬೆಳಕಿಗೆ ಬಂದಿತ್ತು,  (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net