ಕಮಲ್ ಹಾಸನ್ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ ಸಾಧಿಸಿವೆ. ಆದರೆ, ಡಿಲಿಮಿಟೇಶನ್ ಜಾರಿಯಾದರೆ, ಜನಸಂಖ್ಯೆ ಕಡಿಮೆ ಇರುವ ದಕ್ಷಿಣದ ರಾಜ್ಯಗಳ ಸಂಸತ್ ಸ್ಥಾನಗಳು ಕಡಿಮೆಯಾಗಿ, ಜನಸಂಖ್ಯೆ ಹೆಚ್ಚಿರುವ ಉತ್ತರ ಭಾರತದ ರಾಜ್ಯಗಳ ಪ್ರಭಾವ ಹೆಚ್ಚಾಗುತ್ತದೆ.