ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಆ ಬಾಸ್ಕೆಟ್‌ಬಾಲ್ ಕಂಬ ತುಕ್ಕು ಹಿಡಿದಿತ್ತೇ ಅಥವಾ ಅದರ ಫಿಟ್ಟಿಂಗ್‌ನಲ್ಲಿ ದೋಷವಿತ್ತೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇನ್ಸ್‌ಪೆಕ್ಟರ್ ಸಂತೋಷ್ ಪಾಟೀಲ್ ತಿಳಿಸಿದ್ದಾರೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಮಾತನಾಡಿದ್ದು, ಇದೊಂದು ದುರಂತ, ಘಟನೆಗೆ ನಿಖರವಾದ ಕಾರಣ ಏನುಅನ್ನೋದನ್ನ ಪತ್ತೆ ಹಚ್ಚಲಾಗುತ್ತದೆ ಎಂದು ಅವರು ಹೇಳಿದೆ.