ವಂಚಕರು ವೃದ್ಧನ ವಾಟ್ಸಾಪ್ ಸಂಖ್ಯೆಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ಹೆಚ್ಚಿನ ಆದಾಯವನ್ನು ಗಳಿಸುವ ಬಗ್ಗೆ ಸಂದೇಶ ಬಂದಿತ್ತು. ಇದರಲ್ಲಿ ಆಸಕ್ತಿ ತೋರಿದವರನ್ನು ವಿಐಪಿ ಸ್ಟಾಕ್ 24 ಎಂಬುವ ಗುಂಪಿಗೆ ಸೇರಿಸಲಾಗಿತ್ತು. ಈ ಗುಂಪಿನ ಮೂಲಕ, ಆರೋಪಿಗಳು ಆಕರ್ಷಕ ಮತ್ತು ಲಾಭದಾಯಕವೆಂದು ತೋರುವ ಹೂಡಿಕೆ ಯೋಜನೆಗಳನ್ನು ಹಂಚಿಕೊಂಡರು. 11 ದಿನದಲ್ಲಿ ನೀವು ಹಾಕಿರುವ ಹೂಡಿಕೆ ದುಪ್ಪಾಟ್ಟಾಗುತ್ತದೆ ಎಂದು ನಂಬಿಸಿದರು ಎನ್ನಲಾಗಿದೆ.