ಹನಿಮೂನ್ ಕೋಚ್ ಬೆನ್ನಲ್ಲೇ ರೈಲಿನಲ್ಲಿ ಅಭಿಷೇಕದ ವಿಡಿಯೋ ಸದ್ದು: ಕೊನೆಗೂ ಸತ್ಯ ಬಿಚ್ಚಿಟ್ಟ ರೈಲ್ವೆ ಅಧಿಕಾರಿಗಳು! Train Puja Controversy

Train Puja Controversy(ಚಿತ್ರ X)
Train Puja Controversy(ಚಿತ್ರ X)
Published on
Train Puja Controversy: ಇತ್ತೀಚೆಗೆ ರೈಲ್ವೆಯ ವಿಲಾಸಿ ಬೋಗಿಯೊಂದನ್ನು ಹನಿಮೂನ್ ಕೋಚ್ ಎಂದು ನೆಟ್ಟಿಗರು ಟ್ರೋಲ್ ಮಾಡಿದ ಬೆನ್ನಲ್ಲೇ, ಚಲಿಸುವ ರೈಲಿನೊಳಗೆ ಅರ್ಚಕರೊಬ್ಬರು ಭಕ್ತರೊಂದಿಗೆ ಪೂಜೆ ನೆರವೇರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋದಲ್ಲೇನಿದೆ?

ಸಾಮಾಜಿಕ ಜಾಲತಾಣವಾದ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರೈಲ್ವೆ ಬೋಗಿಯೊಂದರ ನೆಲದ ಮೇಲೆ ಕುಳಿತಿರುವ ಅರ್ಚಕರೊಬ್ಬರು ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಪೂಜೆ ಸಲ್ಲಿಸುತ್ತಿರುವುದನ್ನು ಕಾಣಬಹುದು. ಅವರ ಸುತ್ತಲೂ ಬಿಳಿ ವಸ್ತ್ರ ಧರಿಸಿದ ಹಲವಾರು ಭಕ್ತರು ಭಕ್ತಿಯಿಂದ ಕುಳಿತು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ರೈಲು ಚಲಿಸುತ್ತಿರುವಾಗಲೇ ಈ ಇಡೀ ಸಮಾರಂಭ ನಡೆದಿದ್ದು, ಸಹ-ಪ್ರಯಾಣಿಕರೊಬ್ಬರು ಇದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಉತ್ತರ ರೈಲ್ವೆ, ಕಾರ್ಯಕ್ರಮದ ಹಿಂದಿನ ಸಂದರ್ಭಗಳನ್ನು ಸ್ಪಷ್ಟಪಡಿಸಿತು. ಆಚರಣೆಗಳನ್ನು ಸಾಮಾನ್ಯ ಪ್ರಯಾಣಿಕರ ಕೋಚ್ ಒಳಗೆ ನಡೆಸಲಾಗುತ್ತಿಲ್ಲ, ಬದಲಾಗಿ ಖಾಸಗಿಯಾಗಿ ಕಾಯ್ದಿರಿಸಿದ ಸಲೂನ್ ಕಾರಿನಲ್ಲಿ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಜುಲೈ 8 ರಂದು IRCTC ಮೂಲಕ ವಾಣಿಜ್ಯಿಕವಾಗಿ ಸಲೂನ್ ಕೋಚ್ ಅನ್ನು ಬುಕ್ ಮಾಡಲಾಗಿತ್ತು. ಅವರು ಮುಂಗಡವಾಗಿ 3,08,580 ರೂ.ಗಳನ್ನು ಪಾವತಿಸಿದ ನಂತರ ಜುಲೈ 10 ರಂದು ನವದೆಹಲಿ ನಿಂದ ಮುಂಬೈಗೆ ಪ್ರಯಾಣಕ್ಕಾಗಿ ಈ ಕೋಚ್ ಅನ್ನು ರೈಲು ಸಂಖ್ಯೆ 12926 ಪಶ್ಚಿಮ ಎಕ್ಸ್‌ಪ್ರೆಸ್‌ಗೆ ಜೋಡಿಸಲು ನಿರ್ಧರಿಸಲಾಗಿತ್ತು.

ರೈಲ್ವೆ ಹೇಳಿದ್ದೇನು?

ಅಧಿಕಾರಿಗಳ ಪ್ರಕಾರ, ಕಾರ್ಯಾಚರಣೆಯ ಕಾರ್ಯಸಾಧ್ಯತೆಗೆ ಒಳಪಟ್ಟು ಜುಲೈ 10 ರಂದು ಈ ವಿಶೇಷ 'ಸಲೂನ್ ಕೋಚ್' ವಾಣಿಜ್ಯ ಓಟಕ್ಕೆ ರೈಲ್ವೆ ಇಲಾಖೆಯು ಅಧಿಕೃತ ಅನುಮತಿ ನೀಡಿತ್ತು.
ಆದಾಗ್ಯೂ, ಪ್ರಯಾಣಿಕರ ಸಮಯಪಾಲನೆ, ಸುರಕ್ಷತೆ, ಭದ್ರತೆ ಹಾಗೂ ಅನುಕೂಲತೆಯನ್ನು
ಯಾವುದೇ ರಾಜಿ ಇಲ್ಲದೆ ಖಾತ್ರಿಪಡಿಸುವುದು ರೈಲ್ವೆಯ ಪ್ರಾಥಮಿಕ ಜವಾಬ್ದಾರಿಯಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಭಿಷೇಕ ಮಾಡುತ್ತಿರುವ ಅರ್ಚಕರು, ಸಂಬಂಧಪಟ್ಟ ಧಾರ್ಮಿಕ ತಂಡವು ಅಧಿಕೃತವಾಗಿ ಬುಕ್ ಮಾಡಿದ್ದ ವಿಶೇಷ 'ಸಲೂನ್ ಕಾರ್' ಒಳಗೆ ಈ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದೆ ಎಂದು ತಿಳಿಸಿದ್ದಾರೆ.
ಈ ಸಮಾರಂಭವು ನಿಯಮಿತ ರೈಲು ಕಾರ್ಯಾಚರಣೆಗೆ ಅಡ್ಡಿಪಡಿಸಿದೆ ಅಥವಾ ಸಹ ಪ್ರಯಾಣಿಕರಿಗೆ ಅನಾನುಕೂಲವನ್ನುಂಟು ಮಾಡಿದೆ ಎಂಬ ಊಹಾಪೋಹಗಳಿಗೆ ಈ ಸ್ಪಷ್ಟೀಕರಣವು ಪರಿಣಾಮಕಾರಿಯಾಗಿ ತೆರೆ ಎಳೆದಿದೆ.
ಆದಾಗ್ಯೂ, ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಇಂಬು ನೀಡುತ್ತಲೇ ಇತ್ತು, ಅಂತಹ ಸಂದರ್ಭಕ್ಕಾಗಿ ಇಡೀ ಸಲೂನ್ ಕೋಚ್ ಅನ್ನು ಖಾಸಗಿಯಾಗಿ ಬುಕ್ ಮಾಡಬಹುದೇ ಎಂದು ಅನೇಕ ಬಳಕೆದಾರರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಸಮಾರಂಭವು ಸಾರ್ವಜನಿಕ ವಿಭಾಗದಲ್ಲಿ ಅಲ್ಲ, ಬದಲಾಗಿ ವಾಣಿಜ್ಯಿಕವಾಗಿ ಕಾಯ್ದಿರಿಸಿದ ಬೋಗಿಯಲ್ಲಿ ನಡೆದಿದೆ ಎಂದು ಗಮನಿಸಿದ ಇತರರು ಸ್ಪಷ್ಟೀಕರಣವು ಮುಖ್ಯ ಎಂದು ಹೇಳಿದರು. ಅಂದಿನಿಂದ ಈ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಭಾರತೀಯ ರೈಲುಗಳ ಅಸಾಮಾನ್ಯ ಕ್ಷಣಗಳ ಪಟ್ಟಿಗೆ ಸೇರಿಕೊಂಡಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net